kn_obs-tn/content/23/07.md

2.5 KiB

ಸಾಮಾನ್ಯ ಮಾಹಿತಿ

ದೇವದೂತನು ಹೇಳುವುದನ್ನು ಮುಂದುವರಿಸಿದನು

ಬಟ್ಟೆಯಲ್ಲಿ ಸುತ್ತಿಟ್ಟಿದ್ದರು

ನವಜಾತ ಶಿಶುವನ್ನು ಉದ್ದಗಿರುವ ಬಟ್ಟೆಯ ತುಂಡುಗಳಿಂದ ಬಿಗಿಯಾಗಿ ಸುತ್ತುವುದು ಆ ಕಾಲದ ಸಂಪ್ರದಾಯವಾಗಿತ್ತು. "ಸಾಂಪ್ರದಾಯಿಕ ರೀತಿಯಲ್ಲಿ ಉದ್ದವಾದ ಬಟ್ಟೆಯ ತುಂಡುಗಳಲ್ಲಿ ಸುತ್ತಿಟ್ಟಿದ್ದರು" ಎಂದು ಹೇಳುವುದು ಅವಶ್ಯಕವಾಗಿರುತ್ತದೆ.

ಮೇವಿನ ತೊಟ್ಟಿ/ಗೋದಲಿ

ಅಂದರೆ, "ಪ್ರಾಣಿಗಳ ಮೇವಿನ ತೊಟ್ಟಿ." 23:05 ರಲ್ಲಿ ನೀವು ಇದನ್ನು ಹೇಗೆ ಅನುವಾದಿಸಿದ್ದೀರಿ ಎಂಬುದನ್ನು ಸಹ ನೋಡಿರಿ.

ದೇವದೂತರುಗಳಿಂದ ಆವರಿಸಲ್ಪಟ್ಟಿತು

ಅನೇಕ ದೇವದೂತರಿದ್ದರು ಅವರು ಆಕಾಶವನ್ನು ಆವರಿಸಿಕೊಳ್ಳುವಂತೆ ತೋರಿತ್ತು ಎಂಬುದು ಇದರರ್ಥವಾಗಿದೆ.

ದೇವರಿಗೆ ಮಹಿಮೆ

ಇದನ್ನು, "ನಾವೆಲ್ಲರೂ ದೇವರಿಗೆ ಮಹಿಮೆಯನ್ನು ಸಲ್ಲಿಸೋಣ!" ಅಥವಾ, "ನಮ್ಮ ದೇವರು ಸಕಲ ಘನತೆ ಮತ್ತು ಮಹಿಮೆಗೆ ಅರ್ಹನು!" ಅಥವಾ, "ನಾವೆಲ್ಲರೂ ದೇವರನ್ನು ಮಹಿಮೆಪಡಿಸೋಣ!" ಎಂದು ಅನುವಾದಿಸಬಹುದು.

ಭೂಲೋಕದಲ್ಲಿ ಸಮಾಧಾನ

ಇದನ್ನು ಇನ್ನೊಂಧು ರೀತಿಯಲ್ಲಿ ಹೀಗೂ ಹೇಳಬಹುದು, "ಭೂಮಿಯಲ್ಲಿ ಸಮಾಧಾನವಿರಲಿ."

ಆತನು ದಯೆ ತೋರಿಸುವಂಥ ಜನರು

ಇದನ್ನು "ದೇವರು ದಯೆಯಿಂದ, ಮೆಚ್ಚಿಕೆಯಿಂದ, ಅಥವಾ ಕರುಣೆಯಿಂದ ಕಾಣುವ ಜನರು" ಎಂದು ಅನುವಾದಿಸಬಹುದು.

ಅನುವಾದದ ಪದಗಳು