kn_obs-tn/content/23/06.md

1.8 KiB

ಅವರ ಹಿಂಡುಗಳನ್ನು ಕಾಯುತ್ತಿದ್ದರು

ಒಂದು "ಹಿಂಡು" ಎಂದರೆ ಕುರಿಗಳ ಒಂದು ಗುಂಪಾಗಿದೆ. ಕುರುಬರು ತಮ್ಮ ಕುರಿಗಳನ್ನು ಕಾಯುತ್ತಿದ್ದರು ಮತ್ತು ಕೇಡಿನಿಂದ ಅಥವಾ ಕಳ್ಳರಿಂದ ಅವುಗಳನ್ನು ಕಾಪಾಡುತ್ತಿದ್ದರು.

ಪ್ರಕಾರಸುತ್ತಿದ್ದ ದೇವದೂತ

ಇದನ್ನು "ದೇವದೂತನು ಪ್ರಕಾಶಮಾನವಾದ ಬೆಳಕಿನಿಂದ ಸುತ್ತುವರಿಯಲ್ಪಟ್ಟಿದ್ದನು" ಎಂದು ಅನುವಾದಿಸಬಹುದು. ಹೊಳೆಯುತ್ತಿರುವ ಬೆಳಕನ್ನು ರಾತ್ರಿಯ ಕತ್ತಲೆಗೆ ಹೋಲಿಸಿದರೆ ಅದು ಪ್ರಕಾಶಮಾನವಾಗಿ ಕಾಣುತ್ತಿತ್ತು.

ಅವರು ಭಯಭೀತರಾದರು

ಅತೀಂದ್ರಿಯ ದೇವದೂತನ ಪ್ರತ್ಯಕ್ಷತೆಯು ಬಹಳ ಭಯಾನಕವಾಗಿತ್ತು.

ಭಯಪಡಬೇಡಿರಿ

"ಭಯಪಡುವುದನ್ನು ನಿಲ್ಲಿಸಿರಿ" ಎಂಬುದು ಇದರ ಅರ್ಥವಾಗಿದೆ. ಕುರುಬರು ದೇವದೂತನನ್ನು ಕಂಡಾಗ ಅವರು ಬಹಳ ಭಯಭೀತರಾಗಿದ್ದರು, ಆದುದರಿಂದ ಅವನು ಅವರಿಗೆ ಭಯಪಡುವ ಅಗತ್ಯವಿಲ್ಲ ಎಂದು ಹೇಳಿದನು.

ಅನುವಾದದ ಪದಗಳು