kn_obs-tn/content/23/05.md

1.6 KiB

ಇಳಿದುಕೊಳ್ಳಲು ಸ್ಥಳವಿರಲಿಲ್ಲ

ಅಂದರೆ, "ಉಳಿದುಕೊಳ್ಳಲು ಬೇಕಾದ ಸಾಮಾನ್ಯ ಸ್ಥಳವಿರಲಿಲ್ಲ." ಆ ಸಮಯದಲ್ಲಿ ಬೇತ್ಲೆಹೇಮಿನಲ್ಲಿ ತುಂಬಾ ಜನಸಂದಣಿಯಿದ್ದ ಕಾರಣ, ಅತಿಥಿಗಳು ಉಳಿದುಕೊಳ್ಳುವಂಥ ಸಾಮಾನ್ಯ ಕೋಣೆಗಳಲ್ಲಿ ಆಗಲೇ ಜನರು ತುಂಬಿಹೋಗಿದ್ದರು.

ಪ್ರಾಣಿಗಳು ಇರುತ್ತಿದ್ದ ಸ್ಥಳ

ಇದು ಪ್ರಾಣಿಗಳ ಆಶ್ರಯ ಸ್ಥಳವಾಗಿದೆ, ಜನರು ವಾಸಿಸುವ ಸ್ಥಳವಲ್ಲ. ಪ್ರಾಣಿಗಳನ್ನು ಕಟ್ಟಿಹಾಕುವಂಥ ಸ್ಥಳಕ್ಕೆ ಸಾಮಾನ್ಯವಾಗಿ ಬಳಸಲಾಗುವ ಪದವನ್ನು ಬಳಸಿ ಇದನ್ನು ಭಾಷಾಂತರಿಸಿರಿ.

/ಗೋದಲಿ

ಅಂದರೆ, "ಪ್ರಾಣಿಗಳಿಗೆ ಮೇವು ಹಾಕುವ ಪೆಟ್ಟಿಗೆ" ಅಥವಾ "ಪ್ರಾಣಿಗಳಿಗೆ ತಿಂಡಿ ನೀರು ಹಾಕುವ ಮರದ ಅಥವಾ ಕಲ್ಲಿನ ಬಾನೆ/ಪೆಟ್ಟಿಗೆ." ಶಿಶುವನ್ನು ಪೆಟ್ಟಿಗೆಯಲ್ಲಿ ಮಲಗಿಸಲು ಮೆತ್ತೆಯೊದಗಿಸಲು ಪೆಟ್ಟಿಗೆಯಲ್ಲಿ ಹುಲ್ಲನ್ನು ತುಂಬಿರಬಹುದು.

ಅನುವಾದದ ಪದಗಳು