kn_obs-tn/content/23/01.md

2.9 KiB

ಇದು ತನ್ನ ಮಗುವಲ್ಲವೆಂದು ಅವನಿಗೆ ತಿಳಿದಿತ್ತು

ಅಂದರೆ, "ಅವಳು ಗರ್ಭಿಣಿಯಾಗಲು ತಾನು ಕಾರಣವಲ್ಲವೆಂದು ಅವನಿಗೆ ತಿಳಿದಿತ್ತು."

ಮರಿಯಳನ್ನು ಅವಮಾನಿಸಲು

ಅಂದರೆ, "ಮರಿಯಳನ್ನು ಬಹಿರಂಗವಾಗಿ ಅವಮಾನ ಮಾಡಲು" ಅಥವಾ "ಬಹಿರಂಗವಾಗಿ ಮರಿಯಳನ್ನು ನಾಚಿಕೆಗೊಳ್ಳುವಂತೆ ಮಾಡಲು." ಅವಳು ವ್ಯಭಿಚಾರಿಯಂತೆ ತೋರದಂತೆ ಯೋಸೇಫನು ಮರಿಯಳಿಗೆ ಕರುಣೆಯನ್ನು ತೋರಿಸಿದನು.

ಯಾರಿಗೂ ತಿಳಿಯದ ರೀತಿಯಲ್ಲಿ ಅವನು ಅವಳಿಗೆ ವಿಚ್ಛೇದನ ಕೊಡಲು ಆಲೋಚಿಸಿದ್ದನು

ಇದನ್ನು "ಏಕೆ ಎಂಬ ಕಾರಣವನ್ನು ಇತರರಿಗೆ ಹೇಳದೆ ಅವನು ವಿಚ್ಛೇದನ ಕೊಡಲು ಆಲೋಚಿಸಿದ್ದನು" ಅಥವಾ, "ಅವಳು ಗರ್ಭಿಣಿ ಎಂದು ಇತರರಿಗೆ ತಿಳಿಸದೆ ವಿಚ್ಛೇದನ ಕೊಡಲು ಅವನು ಆಲೋಚಿಸಿದ್ದನು" ಎಂದು ಅನುವಾದಿಸಬಹುದು. ಯೋಸೇಫನು ಸಜ್ಜನನಾದ ಕಾರಣ, ಸಾಧ್ಯವಾದಷ್ಟು ಉತ್ತಮವಾದ ರೀತಿಯಲ್ಲಿ ಆ ಪರಿಸ್ಥಿತಿಯನ್ನು ಪರಿಹರಿಸಲು ಬಯಸಿದ್ದನು, ಅದು ಹೇಗೆಂದರೆ ಆ ಸಂಸ್ಕೃತಿಯಲ್ಲಿ ಗುಟ್ಟಾಗಿ ಅವಳಿಗೆ ವಿಚ್ಛೇದನ ಕೊಡುವುದು.

ಅವಳಿಗೆ ವಿಚ್ಛೇದನ ಕೊಡು

ಕೆಲವು ಭಾಷೆಗಳಲ್ಲಿ, "ಅವರ ನಿಶ್ಚಿತಾರ್ಥವನ್ನು ಮುರಿದುಹಾಕು" ಎಂದು ಹೇಳುವುದು ಉತ್ತಮವಾಗಿರಬಹುದು. ಯೋಸೇಫನಿಗೂ ಮತ್ತು ಮರಿಯಳಿಗೂ ನಿಶ್ಚಿತಾರ್ಥವಾಗಿತ್ತು ಅಥವಾ "ವಿವಾಹವಾಗಲು ಮಾತು ಕೊಡಲಾಗಿತ್ತು." ಆದರೆ ಯೆಹೂದ್ಯ ಸಂಸ್ಕೃತಿಯಲ್ಲಿ ನಿಶ್ಚಿತಾರ್ಥವನ್ನು ಮುರಿಯಲು ವಿಚ್ಛೇದನ ಕೊಡುವುದರ ಅಗತ್ಯವಿತ್ತು.

ಕನಸಿನಲ್ಲಿ

ಅಂದರೆ, "ಅವರು ನಿದ್ದೆ ಮಾಡುತ್ತಾ ಕನಸು ಕಾಣುತ್ತಿರುವಾಗ."

ಅನುವಾದದ ಪದಗಳು