kn_obs-tn/content/22/06.md

1.8 KiB
Raw Permalink Blame History

ಎಲಿಸಬೇತ್

22:04 ರಲ್ಲಿರುವ ಎಲಿಸಬೇತಳ ಕುರಿತಾದ ಟಿಪ್ಪಣಿಯನ್ನು ನೋಡಿರಿ.

ಎಲಿಸಬೇತಳು ಮರಿಯಳ ವಂದನೆಯನ್ನು ಕೇಳಿದ ಕೂಡಲೇ

ಕೆಲವು ಭಾಷೆಗಳಲ್ಲಿ, "ಮರಿಯಳು ಎಲಿಸಬೇತಳಿಗೆ ವಂದಿಸಿದಳು ಮತ್ತು ಎಲಿಸಬೇತಳು ಅವಳ ವಂದನೆಯನ್ನು ಕೇಳಿದ ತಕ್ಷಣವೇ" ಎಂದು ಹೇಳುವುದು ಉತ್ತಮವಾಗಿರುತ್ತದೆ.

ಆಕೆಯೊಳಗೆ ಶಿಶುವು ಕುಪ್ಪಳಿಸಿತು

ಎಲಿಸಬೇತಳಿಗೆ ಮರಿಯಳು ಮಾಡಿದ ವಂದನೆಗೆ ಪ್ರತಿಕ್ರಿಯೆಯಾಗಿ ಕೂಸು ಎಲಿಸಬೇತಳ ಗರ್ಭದೊಳಗೆ ಹಠಾತ್ತನೆ ನಲಿದಾಡಿತು.

ದೇವರು ಅವರಿಗೆ ಮಾಡಿರುವಂಥದ್ದನ್ನು

ದೇವರ ಅತೀಂದ್ರಿಯ ಹಸ್ತಕ್ಷೇಪದ ಮೂಲಕ ಇಬ್ಬರು ಸ್ತ್ರೀಯರು ಗರ್ಭಿಣಿಯಾಗಿದ್ದರು ಎಂಬ ಅಂಶವನ್ನು ಇದು ಸೂಚಿಸುತ್ತದೆ. ಮರಿಯಳು ಯಾವುದೇ ವ್ಯಕ್ತಿಯ ಸಂಬಂಧವಿಲ್ಲದೆ ಗರ್ಭಿಣಿಯಾಗಿದ್ದಳು ಮತ್ತು ಮಗುವನ್ನು ಹೆರುವ ಪ್ರಾಯ ಮುಗಿದುಹೋದ ನಂತರವೂ ಎಲಿಸಬೇತಳು ಜಕರೀಯನಿಂದ ಗರ್ಭಿಣಿಯಾಗಿದ್ದಳು.

ಅನುವಾದದ ಪದಗಳು