kn_obs-tn/content/22/05.md

1.6 KiB

ಇದು ಹೇಗೆ ಆಗುತ್ತದೆ

ಅಂದರೆ, "ನಾನು ಹೇಗೆ ಗರ್ಭಿಣಿಯಾಗುವೆನು?" ಮರಿಯಳು ದೇವದೂತನ ಮಾತುಗಳ ಸತ್ಯವನ್ನು ಸಂದೇಹಪಡುತ್ತಿಲ್ಲ, ಆದರೆ ಅದು ಹೇಗೆ ಸಂಭವಿಸುತ್ತದೆ ಎಂದು ಕೇಳುತ್ತಿದ್ದಳು.

ಪವಿತ್ರಾತ್ಮನು ನಿನ್ನ ಮೇಲೆ ಬರುವನು; ಪರಾತ್ಪರನಾದ ದೇವರ ಶಕ್ತಿಯು ನಿನ್ನನ್ನು ಅವರಿಸುವುದು

ಈ ಒಂದೇ ಸಂಗತಿಯನ್ನು ಹೇಳಲು ಎರಡು ರೀತಿಗಳಿವೆ: "ದೇವರ ಶಕ್ತಿಯಿಂದ ಅದ್ಭುತಕರವಾಗಿ ಪವಿತ್ರಾತ್ಮನು ನಿನ್ನನ್ನು ಗರ್ಭಿಣಿಯಾಗುವಂತೆ ಮಾಡುತ್ತಾನೆ." ಇದರಲ್ಲಿ ದೈಹಿಕ ಸಂಪರ್ಕವು ಇತ್ತು ಎಂದು ಅನಿಸದ ಹಾಗೇ ಈ ವಾಕ್ಯವನ್ನು ಅನುವಾದಿಸುವುದಾಗಿ ಖಚಿತಪಡಿಸಿಕೊಳ್ಳಿರಿ. ಇದು ಅದ್ಭುತವಾಗಿತ್ತು.

ಅನುವಾದದ ಪದಗಳು