kn_obs-tn/content/21/13.md

1.6 KiB

ಪಾಪವಿಲ್ಲದವನು

ಇದನ್ನು "ಆತನು ಪಾಪಮಾಡಲಿಲ್ಲ" ಎಂದು ಅನುವಾದಿಸಬಹುದು.

ಬೇರೆ ಜನರ ಪಾಪದ ಶಿಕ್ಷೆಯನ್ನು ಹೊಂದಿಕೊಂಡನು

ಅಂದರೆ, "ಬೇರೆ ಜನರು ಮಾಡಿದ ಪಾಪದ ಶಿಕ್ಷೆಯನ್ನು ತನ್ನ ಮೇಲೆ ತೆಗೆದುಕೊಳ್ಳಲು" ಅಥವಾ "ಬೇರೆ ಜನರಿಗೆ ಬದಲಾಗಿ ಶಿಕ್ಷೆ ಹೊಂದಲು."

ಇದು ದೇವರ ಚಿತ್ತವಾಗಿತ್ತು

ಅಂದರೆ, "ಇದು ದೇವರ ಉದ್ದೇಶವನ್ನು ನೆರವೇರಿಸಿತ್ತು." ಆತನ ಯಜ್ಞವು ಜನರ ಪಾಪಗಳಿಗೆ ಕ್ರಯವನ್ನು ಕಟ್ಟುವಂತೆ ದೇವರು ಯೋಜಿಸಿದ್ದರ ಪ್ರಕಾರವಾಗಿಯೇ ಮೆಸ್ಸೀಯನ ಮರಣವು ನಿಖರವಾಗಿ ಸಂಭವಿಸಿತು ಎಂಬುದು ಈ ಪದಗುಚ್ಛದ ಅರ್ಥವಾಗಿದೆ.

ಜಜ್ಜಲು

ಅಂದರೆ, "ಸಂಪೂರ್ಣವಾಗಿ ಹಾಳುಮಾಡಲು," "ಕೊಲ್ಲಲು" ಅಥವಾ "ಸಂಪೂರ್ಣವಾಗಿ ನಾಶಮಾಡಲು".

ಅನುವಾದದ ಪದಗಳು