kn_obs-tn/content/21/11.md

2.3 KiB

ನಿಷ್ಕಾರಣವಾಗಿ ದ್ವೇಷಿಸಿದರು ಮತ್ತು ತಿರಸ್ಕರಿಸಿದರು

ಇದನ್ನು, "ಆತನು ಯಾವ ತಪ್ಪನ್ನು ಮಾಡದಿದ್ದರೂ ಸಹ, ದ್ವೇಷಿಸಿದರು ಮತ್ತು ತಿರಸ್ಕರಿಸಿದರು" ಅಥವಾ "... ಆತನು ನಿರಪರಾಧಿಯಾಗಿದ್ದರೂ ಸಹ" ಎಂದು ಅನುವಾದಿಸಬಹುದು.

ಮುಂತಿಳಿಸಿದನು

ಅವರು ಭವಿಷ್ಯದಲ್ಲಿ ಸಂಭವಿಸುವ ವಿಷಯಗಳ ಬಗ್ಗೆ ನುಡಿದರು ಎಂಬುದು ಇದರರ್ಥವಾಗಿದೆ. "ಭವಿಷ್ಯ ನುಡಿದನು" ಮತ್ತು "ಪ್ರವಾದಿಸಿದನು" ಎಂಬ ಪದಗಳು ಸಹ ಇದೇ ರೀತಿಯ ಅರ್ಥವುಳ್ಳಂಥ ಇತರ ಪದಗಳಾಗಿವೆ.

ಆತನ ಬಟ್ಟೆಗಳಿಗಾಗಿ ಜೂಜಾಡಿದರು/ಚೀಟುಹಾಕಿದರು

ಅಂದರೆ, "ಆತನ ಬಟ್ಟೆಗಳನ್ನು ಗೆಲ್ಲುವವರು ಯಾರೆಂದು ನಿರ್ಣಯಿಸಲು ಅದೃಷ್ಟದ ಆಟವನ್ನು ಆಡಿದರು."

ಜೆಕರ್ಯ

ಜೆಕರ್ಯನು ದೇವ ಜನರು ಬ್ಯಾಬಿಲೋನಿನ ಸೆರೆವಾಸದಿಂದ ವಾಗ್ದತ್ತ ದೇಶಕ್ಕೆ ಹಿಂದಿರುಗಿ ಬಂದ ನಂತರ ಅವರೊಂದಿಗೆ ಮಾತನಾಡಿದ್ದಂಥ ಹಳೆಯ ಒಡಂಬಡಿಕೆಯ ಪ್ರವಾದಿಯಾಗಿದ್ದಾನೆ. ಇದು ಮೆಸ್ಸೀಯನು ಬರುವುದಕ್ಕಿಂತ ಸುಮಾರು 500 ವರ್ಷಗಳ ಹಿಂದೆ ನಡೆದ ಘಟನೆ.

ಮೂವತ್ತು ಬೆಳ್ಳಿ ನಾಣ್ಯಗಳು

ಆ ಸಮಯದಲ್ಲಿ, ನಾಲ್ಕು ದಿನಗಳಲ್ಲಿ ಒಬ್ಬ ವ್ಯಕ್ತಿಯು ಸಂಪಾದಿಸುವಂಥ ಹಣದ ಬೆಲೆಯು ಈ ನಾಣ್ಯಗಳಿಗಿತ್ತು.

ಅನುವಾದದ ಪದಗಳು