kn_obs-tn/content/21/10.md

1.8 KiB

ಮನಮುರಿದ ಜನರು

ಈ ಪದಗುಚ್ಛವು ತೀವ್ರ ದುಃಖವನ್ನು ಅನುಭವಿಸುತ್ತಿರುವ ಜನರನ್ನು ಸೂಚಿಸುತ್ತದೆ.

ಬಂಧಿತರಿಗೆ ಬಿಡುಗಡೆಯನ್ನು ಸಾರು

ಅಂದರೆ, "ಅವರು ಬಿಡುಗಡೆಯಾಗುವರು ಎಂದು ಗುಲಾಮರಿಗೆ ಹೇಳು" ಇದು ಪಾಪದ ಗುಲಾಮಗಿರಿಯಿಂದ ಜನರನ್ನು ಬಿಡುಗಡೆಗೊಳಿಸುವುದನ್ನು ಸೂಚಿಸುತ್ತದೆ.

ಸೆರೆಯಾಳುಗಳಿಗೆ ಬಿಡುಗಡೆ

ಅಂದರೆ, "ಅನ್ಯಾಯವಾಗಿ ಸೆರೆಮನೆಯಲ್ಲಿ ಹಾಕಲ್ಪಟ್ಟವರನ್ನು ಆತನು ಬಿಡಿಸುವನು." ಇದು ಪಾಪದ ಬಂಧನದಿಂದ ಜನರನ್ನು ಬಿಡಿಸುವುದನ್ನು ಕೂಡ ಸೂಚಿಸುತ್ತದೆ.

ಕೇಳಲಾರದವರು,ನೋಡಲಾರದವರು, ಮಾತನಾಡಲಾರದವರು ಅಥವಾ ನಡೆಯಲಾರದವರು

"ಕಿವಿ ಕೇಳದವರು, ಕಣ್ಣು ಕಾಣದವರು, ಮಾತನಾಡಲು ಆಗದವರು, ಅಥವಾ ನಡೆಯಲು ಆಗದವರು" ಎಂದು ಹೇಳುವುದು ಉತ್ತಮವಾಗಿರುತ್ತದೆ. ಕೆಲವು ಭಾಷೆಗಳಲ್ಲಿ ಈ ತರಹದ ಸ್ಥಿತಿಗಳಿಗೆ "ಕಿವುಡ" ಮತ್ತು "ಕುರುಡು" ಎಂಬಂತಹ ವಿಶೇಷ ಪದಗಳಿವೆ.

ಅನುವಾದದ ಪದಗಳು