kn_obs-tn/content/21/07.md

2.1 KiB

ಪರವಾಗಿ

ಇದನ್ನು "ಪ್ರಯೋಜನಕ್ಕಾಗಿ" ಅಥವಾ "ಬದಲಿಯಾಗಿ" ಎಂದು ಅನುವಾದಿಸಬಹುದು.

ಅವರ ಪಾಪಗಳ ಶಿಕ್ಷೆಗಾಗಿ ಬದಲಾಗಿ

ಅವರ ಪಾಪದ ನಿಮಿತ್ತವಾಗಿ ಅವರು ಶಿಕ್ಷೆಗೆ ಯೋಗ್ಯರಾಗಿದ್ದಾರೆ ಮತ್ತು ಅವರ ಪಾಪವನ್ನು ನಿವಾರಿಸಲು ದೇವರನ್ನು ಅವಲಂಬಿಸಿದ್ದಾರೆ ಎಂದು ನೆನಪಿಸಿಕೊಳ್ಳುವಂತೆ ಮಾಡಲು ಯಜ್ಞವಾಗಿ ಅರ್ಪಿಸುವುದಕ್ಕೆ ಪ್ರಾಣಿಗಳನ್ನು ತರಲು ದೇವರು ಅವಕಾಶ ಮಾಡಿಕೊಟ್ಟನು. ದೇವರು ಈ ಯಜ್ಞಗಳನ್ನು ತಾತ್ಕಾಲಿಕವಾದ ಪಾಪದ ಪರಿಹಾರವಾಗಿ ಅಂಗೀಕರಿಸಿಕೊಂಡನು ಮತ್ತು ಅದಕ್ಕಾಗಿ ಜನರನ್ನು ಶಿಕ್ಷಿಸಲಿಲ್ಲ.

ಪರಿಪೂರ್ಣನಾದ ಮಹಾಯಾಜಕನು

ಇತರ ಮಹಾಯಾಜಕರು ಮಾಡಿದಂತೆ, ಮೆಸ್ಸೀಯನು ಪಾಪಮಾಡುವುದಿಲ್ಲ, ಮತ್ತು ಜನರ ಸಕಲ ಪಾಪಗಳನ್ನು ಆತನು ಶಾಶ್ವತವಾಗಿ ನಿವಾರಿಸುವನು.

ತನ್ನನ್ನು ತಾನು ಅರ್ಪಿಸಿಕೊಳ್ಳುವನು

ಅಂದರೆ, "ಕೊಲ್ಲಲ್ಪಡಲು ತನ್ನನ್ನು ತಾನು ಒಪ್ಪಿಸಿಕೊಟ್ಟನು."

ಪರಿಪೂರ್ಣವಾದ ಯಜ್ಞ

ಅಂದರೆ, "ಕುಂದು ಅಥವಾ ಕೊರತೆ ಇಲ್ಲದ ಯಜ್ಞ."

ಅನುವಾದದ ಪದಗಳು