kn_obs-tn/content/21/05.md

3.4 KiB

ಪ್ರವಾದಿಯಾದ ಯೆರೆಮೀಯನ ಮೂಲಕ ದೇವರು ವಾಗ್ದಾನ ಮಾಡಿದನು

"ದೇವರು ಯೆರೆಮೀಯನಿಗೆ ನೀಡಿದ ಸಂದೇಶಗಳ ಮೂಲಕ ದೇವರು ವಾಗ್ದಾನ ಮಾಡಿದನು" ಅಥವಾ "ಪ್ರವಾದಿಯಾದ ಯೆರೆಮೀಯನು ಜನರಿಗೆ ದೇವರ ವಾಗ್ದಾನವನ್ನು ತಿಳಿಸಿದನು" ಎಂದು ಇದನ್ನು ಅನುವಾದಿಸಬಹುದು.

ಆದರೆ ಅದರಂತೆ ಅಲ್ಲ

ಹೊಸ ಒಡಂಬಡಿಕೆಯು ನಿಜವಾಗಿಯೂ ಪರಿಣಾಮಕಾರಿಯಾಗಿರುತ್ತದೆ. ಜನರು ನಿಜವಾಗಿಯೂ ದೇವರನ್ನು ತಿಳಿದುಕೊಳ್ಳುವರು, ಅವರು ಆತನ ಜನರಾಗಿ ನಿಷ್ಠೆಯಿಂದ ಬದುಕುವರು, ಮತ್ತು ಆತನನ್ನು ನಂಬುವಂತಹ ಎಲ್ಲರಿಗಾಗಿ ಒಂದು ಸಾರಿ ತನ್ನನ್ನೇ ಯಜ್ಞವಾಗಿ ಅರ್ಪಿಸುವಂಥ ಮೆಸ್ಸೀಯನ ಯಜ್ಞದ ಆಧಾರದ ಮೇಲೆ ಆತನು ಅವರ ಪಾಪಗಳನ್ನು ಸಂಪೂರ್ಣವಾಗಿ ಕ್ಷಮಿಸುವನು.

ಜನರ ಹೃದಯಗಳಲ್ಲಿ ಆತನ ನಿಯಮವನ್ನು ಬರೆಯುವನು

ಇದು ಅಲಂಕಾರಿಕವಾದ ಅರ್ಥವಾಗಿದೆ, "ಆತನ ಜನರಿಗೆ ತನ್ನ ನಿಯಮಗಳನ್ನು ಅರ್ಥಮಾಡಿಕೊಳ್ಳಲು ಮತ್ತು ಆಸಕ್ತಿಯಿಂದ ಅವುಗಳನ್ನು ಅನುಸರಿಸುವುದಕ್ಕೆ ಆಶಿಸಲು ಸಹಾಯ ಮಾಡು." ಸಾಧ್ಯವಾದರೆ, ಅವರ ಹೃದಯದ ಮೇಲೆ ಬರೆಯುವಂಥ ರೂಪಕವನ್ನು ಕಾಪಾಡಿಕೊಳ್ಳಿರಿ, ಏಕೆಂದರೆ ಇಸ್ರಾಯೇಲರಿಗಾಗಿ ದೇವರು ಕಲ್ಲಿನ ಹಲಿಗೆಗಳ ಮೇಲೆ ತನ್ನ ನಿಯಮವನ್ನು ಬರೆದು ಕೊಟ್ಟ ರೀತಿಯು ಇದಕ್ಕೆ ವ್ಯತಿರಿಕ್ತವಾಗಿದೆ. ಇದು ಸಾಧ್ಯವಾಗದಿದ್ದರೆ, ಇದರ ಬರೀ ಅರ್ಥವನ್ನು ಮಾತ್ರ ನೀವು ಅನುವಾದಿಸಬಹುದು.

ಆತನ ಜನರಾಗಿರಿ

ಇದನ್ನು "ಆತನ ವಿಶೇಷ ಜನರಾಗಿರಿ" ಅಥವಾ "ಆತನ ನೆಚ್ಚಿನ ಜನರಾಗಿರಿ" ಎಂದು ಅನುವಾದಿಸಬಹುದು.

ಹೊಸ ಒಡಂಬಡಿಕೆಯನ್ನು ಪ್ರಾರಂಭಿಸು

ಅಂದರೆ, "ಹೊಸ ಒಡಂಬಡಿಕೆಯು ಪರಿಣಾಮಕಾರಿಯಾಗುವಂತೆ ಮಾಡುವುದರಲ್ಲಿ ಒಬ್ಬರಾಗಿರಿ" ಅಥವಾ "ಆತನ ಜನರಿಗೆ ಹೊಸ ಒಡಂಬಡಿಕೆಯನ್ನು ಪರಿಚಯಿಸಿರಿ ."

ಅನುವಾದದ ಪದಗಳು