kn_obs-tn/content/20/13.md

2.0 KiB

ಜನರು

ಅಂದರೆ ಈಗ ಯೆಹೂದ್ಯರು ಎಂದು ಕರೆಯಲ್ಪಡುವಂಥ ಯಾಕೋಬನ ಸಂತತಿಯವರಾದ ಇಸ್ರಾಯೇಲರು.

ಗೋಡೆ

ಈ ಗೋಡೆಯು ತುಂಬಾ ದಪ್ಪವಾಗಿತ್ತು (2.5 ಮೀಟರ್) ಮತ್ತು ಆಕ್ರಮಣಕಾರರಿಂದ ಪಟ್ಟಣವನ್ನು ರಕ್ಷಿಸಲು ಇದನ್ನು ನಿರ್ಮಿಸಲಾಗಿತ್ತು.

ಬೇರೆ ಜನರು ಆಳುತ್ತಿದ್ದರು

ಅಂದರೆ, ಮತ್ತೊಂದು ಜನಾಂಗವು ಅವರನ್ನು ನಿಯಂತ್ರಿಸುತ್ತಿತ್ತು. ಈ ಸಮಯದಲ್ಲಿ ಪರ್ಷಿಯನ್ನರು ಯೆಹೂದ್ಯರನ್ನು ಆಳುತ್ತಿದ್ದರು, ಮತ್ತು ಇದಾದ ನಂತರ ಬೇರೆ ಜನಾಂಗಗಳು ಅವರನ್ನು ಆಳಿದರು.

ಮತ್ತೊಮ್ಮೆ

ಕೆಲವು ಭಾಷೆಗಳಲ್ಲಿ ಇದನ್ನು, "ಈಗ" ಅಥವಾ "ತಮ್ಮ ಪೂರ್ವಿಕರು ಮಾಡಿದಂತೆ" ಅಥವಾ "ಸೆರೆವಾಸಕ್ಕಿಂತ ಮುಂಚೆ ಇದ್ದಂತೆ" ಎಂದು ಭಾಷಾಂತರಿಸಬೇಕಾಗಬಹುದು.

ದೇವಾಲಯದಲ್ಲಿ ಆರಾಧಿಸಿದರು

ಅವರು ತಾವು ಪುರ್ನನಿರ್ಮಿಸಿದಂಥ ದೇವಾಲಯದಲ್ಲಿ ನಿಜವಾದ ಏಕೈಕ ದೇವರಾದ ಯೆಹೋವನನ್ನು ಆರಾಧಿಸಿದರು.

ಇದೊಂದು ಸತ್ಯವೇದದ ಕಥೆ

ಸತ್ಯವೇದದ ಕೆಲವು ಭಾಷಾಂತರಗಳಲ್ಲಿ ಈ ಉಲ್ಲೇಖಗಳು ಸ್ವಲ್ಪ ಭಿನ್ನವಾಗಿರುತ್ತವೆ.

ಅನುವಾದದ ಪದಗಳು