kn_obs-tn/content/20/11.md

2.4 KiB

ಎಪ್ಪತ್ತು ವರ್ಷಗಳಾದ ನಂತರ

ಇದು ಬ್ಯಾಬಿಲೋನಿನ ಸೇನೆಯು ಯೆರೂಸಲೇಮಿನ ಜನರನ್ನು ಸೆರೆವಾಸಕ್ಕೆ ಕೊಂಡೊಯ್ದದಂದಿನಿಂದ ಗತಿಸಿಹೋದ ಎಪ್ಪತ್ತು ವರ್ಷಗಳನ್ನು ಸೂಚಿಸುತ್ತದೆ.

ಕೋರೆಷನು

ಕೋರೆಷನನ್ನು "ಸೈರಸ್ ದಿ ಗ್ರೇಟ್/ಕೋರೆಷ್ ಮಹಾಶಯ" ಎಂದು ಕೂಡ ಕರೆಯಲಾಗುತ್ತದೆ. ಪರ್ಷಿಯನ್ ಭಾಷೆಯಲ್ಲಿ "ಕೋರೆಷ್" ಎಂಬ ಹೆಸರಿನ ಅರ್ಥವು "ಸೂರ್ಯನಂತೆ" ಎಂದಾಗಿದೆ. ಕೋರೆಷನು ಐತಿಹಾಸಿಕವಾಗಿ ಪ್ರಮುಖ ವ್ಯಕ್ತಿಯಾಗಿರುವುದರಿಂದ, ಅವನ ಹೆಸರಿನ ಅರ್ಥವನ್ನು ಭಾಷಾಂತರಿಸುವ ಬದಲು ಅವನ ಹೆಸರನ್ನು ಭಾಷಾ ಭಾಷಾಂತರಿಸುವುದು ಉತ್ತಮವಾಗಿರುತ್ತದೆ.

ಪರ್ಷಿಯನ್ನರು/ಪಾರಸಿಯರು

ಪರ್ಷಿಯಾದ ಸಾಮ್ರಾಜ್ಯವು ಮಧ್ಯ ಏಷ್ಯಾದಿಂದ ಈಜಿಪ್ಟಿನವರೆಗೆ ವ್ಯಾಪಿಸುವಷ್ಟರ ಮಟ್ಟಿಗೆ ಬೆಳೆಯಿತು. ಇದರ ತಾಯಿನಾಡು ಅಧುನಿಕ ಇರಾನಿನ ಸಾರ್ವತ್ರಿಕ ಪ್ರದೇಶದಲ್ಲಿದೆ.

ಈಗ ಇಸ್ರಾಯೇಲ್ಯರನ್ನು ಯೆಹೂದ್ಯರು ಎಂದು ಕರೆಯಲಾಗುತ್ತದೆ

ಇದನ್ನು, "ಜನರು ಈಗ ಇಸ್ರಾಯೇಲ್ಯರನ್ನು 'ಯೆಹೂದ್ಯರು' ಎಂಬ ಹೆಸರಿನಿಂದ ಕರೆಯುತ್ತಾರೆ" ಎಂದು ಅನುವಾದಿಸಬಹುದು.

ಯೆಹೂದ ದೇಶ

ಅಂದರೆ, ಸೆರೆವಾಸಕ್ಕಿಂತ ಮೊದಲು ಯೆಹೂದ ರಾಜ್ಯವು ಇದ್ದಂಥ ಪ್ರದೇಶವಾಗಿದೆ. ಯೆರೂಸಲೇಮ್ ಯೆಹೂದದ ರಾಜಧಾನಿಯಾಗಿತ್ತು.

ಅನುವಾದದ ಪದಗಳು