kn_obs-tn/content/19/06.md

2.4 KiB

ಕರ್ಮೆಲ್ ಬೆಟ್ಟ

19:05 ರಲ್ಲಿ ನೀವು ಇದನ್ನು ಹೇಗೆ ಅನುವಾದಿಸಿದ್ದೀರಿ ಎಂಬುದನ್ನು ನೋಡಿರಿ.

ನೀವು ಎಷ್ಟರವರೆಗೆ

ಇದು ಮಾಹಿತಿ ಪಡೆದುಕೊಳ್ಳಲು ಕೇಳುವಂಥ ನಿಜವಾದ ಪ್ರಶ್ನೆಯಲ್ಲ. ಯೆಹೋವನನ್ನು ಅಥವಾ ಬಾಳನನ್ನು ಸೇವಿಸುವುದರ ಬಗ್ಗೆ ಪದೇ ಪದೇ ತಮ್ಮ ಮನಸ್ಸನ್ನು ಬದಲಾಯಿಸುತ್ತಿದ್ದುದಕ್ಕಾಗಿ ಎಲೀಯನು ಇಸ್ರಾಯೇಲರನ್ನು ಗದರಿಸುತ್ತಿದ್ದಾನೆ. ಕೆಲವು ಭಾಷೆಗಳಲ್ಲಿ ಇದನ್ನು "ನೀವು ಯಾರನ್ನು ಆರಾಧಿಸಬೇಕು ಎಂಬುದರ ಬಗ್ಗೆ ನಿಮ್ಮ ಮನಸ್ಸನ್ನು ಬದಲಿಸಿಕೊಳ್ಳುವುದನ್ನು ನಿಲ್ಲಿಸಿರಿ!" ಎಂದು ವ್ಯಕ್ತಪಡಿಸಬೇಕು.

ಯೆಹೋವನು ದೇವರಾಗಿದ್ದರೆ…ಬಾಳನು ದೇವರಾಗಿದ್ದರೆ

ಎಲೀಯನಿಗೆ ಇದರ ಬಗ್ಗೆನಿಶ್ಚಯವಿರಲಿಲ್ಲ ಎಂಬುದು ಇದರರ್ಥವಲ್ಲ. ಯೆಹೋವನು ನಿಜವಾದ ದೇವರು ಎಂದು ಅವನಿಗೆ ತಿಳಿದಿತ್ತು. ಅವರು ಸುಳ್ಳಾದ ದೇವರುಗಳನ್ನು ಪೂಜಿಸುವಾಗ, ಅವರು ಯೆಹೋವನು ನಿಜವಾದ ಏಕೈಕ ದೇವರಾಗಿದ್ದಾನೆಂಬುದನ್ನು ತಿರಸ್ಕರಿಸುತ್ತಿದ್ದಾರೆಂದು ಜನರು ಅರ್ಥಮಾಡಿಕೊಳ್ಳಬೇಕೆಂದು ಅವನು ಬಯಸಿದನು. ಜನರು ಆಯ್ಕೆ ಮಾಡಿಕೊಳ್ಳಬೇಕಾದ ಸ್ಥಿತಿಯಲ್ಲಿದ್ದಾರೆಂದು ತೋರಿಸುವ ರೀತಿಯಲ್ಲಿ ಇದನ್ನು ಭಾಷಾಂತರಿಸಿರಿ.

ಅನುವಾದದ ಪದಗಳು