kn_obs-tn/content/19/04.md

2.2 KiB

ನೆರೆಯ ದೇಶ

ಇದು ಇಸ್ರಾಯೇಲಿನ ಪಕ್ಕದಲ್ಲಿದ್ದ ಅಥವಾ ಮೇರೆಯನ್ನು ಹಂಚಿಕೊಂಡಿದ್ದ ದೇಶವನ್ನು ಸೂಚಿಸುತ್ತದೆ.

ಬರಗಾಲ

ಅಗತ್ಯವಿದ್ದರೆ, ಇದನ್ನು "ಕ್ಷಾಮದಿಂದ ಉಂಟಾದ ಬರಗಾಲ" ಎಂದು ಅನುವಾದಿಸಬಹುದು.

ಆರೈಕೆ ಮಾಡಿದರು

ಅವರು ತಮ್ಮ ಮನೆಯಲ್ಲಿ ಉಳಿದುಕೊಳ್ಳಲು ಅವನಿಗೆ ಸ್ಥಳವನ್ನು ನೀಡಿದರು ಮತ್ತು ಅವನಿಗೆ ಆಹಾರವನ್ನು ಕೊಟ್ಟರು ಎಂದು ಇದರರ್ಥವಾಗಿದೆ. ಅವನು ರೋಗಿಯಾಗಿದ್ದನು ಎಂಬುದು ಇದರರ್ಥವಲ್ಲ.

ದೇವರು ಅವರಿಗೆ ಒದಗಿಸಿಕೊಟ್ಟನು... ಅವರಿಗೆ ಕೊರತೆಯಗಲ್ಲಿಲ್ಲ

ಇದನ್ನು "ದೇವರು ಅವರ ಹಿಟ್ಟಿನ ಮಡಿಕೆ ಮತ್ತು ಅವರ ಎಣ್ಣೆಯ ಭರಣಿಯು ಖಾಲಿಯಾಗದಂತೆ ತಡೆಹಿಡಿದನು" ಅಥವಾ "ಖಾಲಿಯಾಗದಂತೆ... ದೇವರು ಮಾಡಿದನು " ಎಂದು ಅನುವಾದಿಸಬಹುದು.

ಹಿಟ್ಟಿನ ಮಡಿಕೆ

ಇದು ಮಣ್ಣಿನ ಮಡಿಕೆಯನ್ನು ಸೂಚಿಸುತ್ತದೆ, ಇದರಲ್ಲಿ ವಿಧವೆಯು ತನಗೆ ಅಗತ್ಯವಾದ ಹಿಟ್ಟನ್ನು ಹಾಕಿಟ್ಟುಕೊಂಡಿದ್ದಳು.

ಎಣ್ಣೆಯ ಭರಣಿ

ಇಸ್ರಾಯೇಲಿನಲ್ಲಿ, ಆಲಿವ್ ಎಣ್ಣೆಯನ್ನು ಅಡುಗೆಗಾಗಿ ಬಳಸಲಾಗುತ್ತಿತ್ತು. ಇದನ್ನು "ಆಡುಗೆ ಎಣ್ಣೆಯ ಭರಣಿ" ಎಂದು ಅನುವಾದಿಸಬಹುದು. ಈ ವಿಧವೆಯು ರೊಟ್ಟಿಯನ್ನು ಮಾಡಲು ಹಿಟ್ಟನ್ನು ಮತ್ತು ಎಣ್ಣೆಯನ್ನು ಬಳಸಿದಳು.

ಅನುವಾದದ ಪದಗಳು