kn_obs-tn/content/16/18.md

2.2 KiB

ಅಂತಿಮವಾಗಿ

ಇದನ್ನು "ಅವರ ಶತ್ರುಗಳು ಅವರನ್ನು ಅನೇಕ ಬಾರಿ ದಾಳಿ ಮಾಡಿದ ನಂತರ" ಅಥವಾ "ಹಲವು ವರ್ಷಗಳ ಕಾಲ ಅನೇಕ ಜನಾಂಗಗಳಿಂದ ದಾಳಿಗೊಳಗಾದ ನಂತರ" ಎಂದು ಅನುವಾದಿಸಬಹುದು.

ಅರಸನಿಗಾಗಿ ದೇವರನ್ನು ಕೇಳಿಕೊಂಡರು

ಇದನ್ನು "ದೇವರು ಅವರಿಗೆ ಅರಸನನ್ನು ಕೊಡಬೇಕೆಂದು ಒತ್ತಾಯಿಸಿದರು" ಅಥವಾ "ಅರಸ ಬೇಕೆಂದು ದೇವರನ್ನು ಕೇಳಿಕೊಳ್ಳುತ್ತಿದ್ದರು" ಎಂದು ಅನುವಾದಿಸಬಹುದು.

ಇತರ ಎಲ್ಲಾ ಜನಾಂಗಗಳಿಗೆ ಇರುವಂತೆ

ಇತರ ಜನಾಂಗಗಳಿಗೆ ಅರಸರಿದ್ದರು. ಇಸ್ರಾಯೇಲರು ಅವರಂತೆಯೇ ಇರಬೇಕೆಂದು ಬಯಸಿದರು ಮತ್ತು ಅರಸನು ಬೇಕೆಂದು ಸಹ ಬಯಸಿದರು.

ದೇವರಿಗೆ ಈ ಬಿನ್ನಹವು ಇಷ್ಟವಾಗಲಿಲ್ಲ

ಇದನ್ನು, "ಅವರು ದೇವರ ಬಳಿ ಕೇಳಿಕೊಂಡದ್ದನ್ನು ಮಾಡಲು ದೇವರು ಒಪ್ಪಲಿಲ್ಲ" ಎಂದು ಅನುವಾದಿಸಬಹುದು. ಅವರು ದೇವರು ತಮ್ಮ ಅಧಿಪತಿಯಾಗಿರುವುದು ಬೇಡವೆಂದು ಆತನನ್ನು ತಿರಸ್ಕರಿಸುತ್ತಾರೆ ಮತ್ತು ಆತನ ಬದಲು ಮಾನವ ನಾಯಕನನ್ನು ಅನುಸರಿಸಲು ಆಯ್ಕೆ ಮಾಡಿಕೊಳ್ಳುತ್ತಾರೆ ಎಂದು ದೇವರಿಗೆ ತಿಳಿದಿತ್ತು.

ಸತ್ಯವೇದದ ಕಥೆ

ಸತ್ಯವೇದದ ಕೆಲವು ಭಾಷಾಂತರಗಳಲ್ಲಿ ಈ ಉಲ್ಲೇಖಗಳು ಸ್ವಲ್ಪ ಭಿನ್ನವಾಗಿರುತ್ತವೆ.

ಅನುವಾದದ ಪದಗಳು