kn_obs-tn/content/16/10.md

1.7 KiB

32,000 ಇಸ್ರಾಯೇಲರ ಸೈನಿಕರು ಗಿದ್ಯೋನನ ಬಳಿಗೆ ಬಂದರು

ಕೆಲವು ಭಾಷೆಗಳಲ್ಲಿ ಕಥೆಯ ಆರಂಭದಲ್ಲಿ ಈ ಕೆಳಗಿನ ವಾಕ್ಯವನ್ನು ಸೇರಿಸಬೇಕಾಗಬಹುದು: "ಮಿದ್ಯಾನ್ಯರ ವಿರುದ್ಧ ಹೋರಾಡಲು ಗಿದ್ಯೋನನು ಇಸ್ರಾಯೇಲರನ್ನು ಕರೆದನು." ನೋಡಿರಿ 16:08.

ಬಹಳಷ್ಟು

ಈ ಯುದ್ಧಕ್ಕಾಗಿ ದೇವರು ಬಯಸಿದ್ದಕ್ಕಿಂತ ಹೆಚ್ಚು ಸೈನಿಕರು ಇದ್ದರು. ಅಷ್ಟು ಮಂದಿ ಸೈನಿಕರು ಹೋರಾಡಿ ಜಯಗಳಿಸಿದರೆ, ಅವರು ತಮ್ಮದೇ ಆದ ಶಕ್ತಿಯಿಂದ ಯುದ್ಧವನ್ನು ಗೆದ್ದಿದ್ದೇವೆಂದು ಅವರು ಭಾವಿಸುತ್ತಾರೆ, ಮತ್ತು ದೇವರು ಅದನ್ನು ಮಾಡಿದವನು ಎಂದು ಅವರು ತಿಳಿದುಕೊಳ್ಳುವುದಿಲ್ಲ.

300 ಮಂದಿ ಸೈನಿಕರನ್ನು ಹೊರತುಪಡಿಸಿ

ಈ ವಾಕ್ಯವನ್ನು, "ಹಾಗಾಗಿ ಗಿದ್ಯೋನನು 300 ಮಂದಿಗೆ ಮಾತ್ರವೇ ಇರಲು ಅವಕಾಶ ಮಾಡಿಕೊಟ್ಟನು ಮತ್ತು ಉಳಿದ ಸೈನಿಕರು ಮನೆಗೆ ಹೋದರು" ಎಂದು ಅನುವಾದಿಸಬಹುದು.

ಅನುವಾದದ ಪದಗಳು