kn_obs-tn/content/16/09.md

2.1 KiB

ಗುರುತು

ಇದನ್ನು "ಅದ್ಭುತ" ಅಥವಾ "ಅಸಾಧ್ಯವಾದ ಕಾರ್ಯ" ಎಂದು ಅನುವಾದಿಸಬಹುದು.

ಕುರಿಯ ಉಣ್ಣೆ/ತುಪ್ಪಟ

ಇದು ಕುರಿಯ ಚರ್ಮವಾಗಿದ್ದು, ಅದರ ಮೇಲೆಲ್ಲಾ ಉಣ್ಣೆ ಇರುತ್ತದೆ. ಉಣ್ಣೆಯು ತುಂಬಾ ದಪ್ಪವಾಗಿರುತ್ತದೆ ಮತ್ತು ಗುಂಗುರು ಕೂದಲು ಇರುತ್ತದೆ, ಅದು ಸಾಕಷ್ಟು ನೀರು ಹಿಡಿದಿಡುತ್ತದೆ. ಈ ಚರ್ಮವು ದಪ್ಪಾವಾಗಿರುವ, ಮೃದುವಾಗಿರುವ ಕೂದಲಿನಿಂದ ತುಂಬಿರುತ್ತದೆ ಎಂಬುದನ್ನು ಸ್ಪಷ್ಟಪಡಿಸುವ ರೀತಿಯಲ್ಲಿ ಇದನ್ನು ಭಾಷಾಂತರಿಸಿರಿ.

ಮುಂಜಾನೆಯ ಮಂಜು ಬೀಳಲಿ

ಇದನ್ನು "ಮುಂಜಾನೆಯ ಮಂಜು ಕಾಣಿಸಿಕೊಳ್ಳುವಂತೆ ಮಾಡು" ಅಥವಾ "ಮುಂಜಾನೆಯ ಮಂಜು ತೋರಿಬರುವಂತೆ ಮಾಡು" ಎಂದು ಅನುವಾದಿಸಬಹುದು. "ಮಂಜು" ಮುಂಜಾನೆಯಲ್ಲಿ ನೆಲದ ಮೇಲೆ ಕಂಡುಬರುವ ನೀರಿನ ಹನಿಗಳನ್ನು ಸೂಚಿಸುತ್ತದೆ. ಸ್ವಾಭಾವಿಕವಾಗಿ ಮಂಜು ಎಲ್ಲವನ್ನೂ ಸಮನಾಗಿ ಆವರಿಸುತ್ತದೆ.

ದೇವರು ಅದನ್ನು ಮಾಡಿದನು

ಇದನ್ನು "ಗಿದ್ಯೋನನು ಏನು ಮಾಡಬೇಕೆಂದು ಕೇಳಿಕೊಂಡನೋ ಅದನ್ನು ದೇವರ ಮಾಡಿದನು" ಎಂದು ಅನುವಾದಿಸಬಹುದು.

ಅನುವಾದದ ಪದಗಳು