kn_obs-tn/content/15/06.md

2.2 KiB

ಸಮಾಧಾನದ ಒಡಂಬಡಿಕೆ

ಇದು ಜನರ ಎರಡು ಗುಂಪುಗಳ ನಡುವಿನ ಒಪ್ಪಂದವಾಗಿದ್ದು, ಅವರು ಪರಸ್ಪರ ಒಬ್ಬರಿಗೊಬ್ಬರು ಕೇಡುಮಾಡುವುದಿಲ್ಲ ಆದರೆ ಸಮಾಧಾನವಾಗಿ ಬದುಕುವರು ಮತ್ತು ಪರಸ್ಪರ ಒಬ್ಬರಿಗೊಬ್ಬರು ಸಹಾಯ ಮಾಡುವರು. ಇದನ್ನು "ಸಮಾಧಾನದ ಒಪ್ಪಂದ" ಎಂದು ಅನುವಾದಿಸಬಹುದು.

ಅಂದರೆ ಗಿಬ್ಯೋನ್ಯರು ಎಂದು ಕರೆಯಲ್ಪಡುವ ಕಾನಾನ್ಯ ಜನರಲ್ಲಿ ಒಂದು ಜನಾಂಗ

ಕೆಲವು ಭಾಷೆಗಳಲ್ಲಿ ಇದನ್ನು "ಆದರೆ ಒಂದು ದಿನ ಗಿಬ್ಯೋನ್ಯರು ಎಂಬ ಹೆಸರುಳ್ಳ ಕಾನಾನ್ಯರ ಜನಾಂಗ ... "ಎಂದು ಪರಿಚಯಿಸಬಹುದು.

ಯೆಹೋಶುವನಿಗೆ ಸುಳ್ಳು ಹೇಳಿದರು ಮತ್ತು ಹೇಳಿದ್ದೇನಂದರೆ

ಇದನ್ನು ಅವರು "ಹೀಗೆ ಹೇಳುವ ಮೂಲಕ ಯೆಹೋಶುವನಿಗೆ ಸುಳ್ಳು ಹೇಳಿದರು" ಅಥವಾ "ಅವರು ಯೆಹೋಶುವನಿಗೆ ಅಸತ್ಯವನ್ನು ಹೇಳಿದರು" ಅಥವಾ "ಅವರು ಯೆಹೋಶುವನಿಗೆ ಹುಸಿಯನ್ನು ಹೇಳಿದರು" ಎಂದು ಅನುವಾದಿಸಬಹುದು.

ಗಿಬ್ಯೋನ್ಯರು ಬಂದಂಥ ಸ್ಥಳದಿಂದ

ಅಂದರೆ, "ಗಿಬ್ಯೋನ್ಯರು ವಾಸಿಸುತ್ತಿದ್ದಂಥ ಸ್ಥಳ" ಅಥವಾ "ಗಿಬ್ಯೋನ್ಯರ ಮನೆ ಇದ್ದ ಸ್ಥಳ." "ಗಿಬ್ಯೋನ್ಯರು" ಎಂದರೆ, "ಗಿಬ್ಯೋನಿನ ಜನರು" ಎಂದರ್ಥವಾಗಿದೆ.

ಅನುವಾದದ ಪದಗಳು