kn_obs-tn/content/15/01.md

2.9 KiB

ಕೊನೆಗೂ ಅದರ ಸಮಯ ಕೂಡಿ ಬಂತು

"ಕೊನೆಗೆ" ಎಂದರೆ "ಅಂತಿಮವಾಗಿ" ಅಥವಾ "ಸುದೀರ್ಘವಾದ ಸಮಯದ ನಂತರ" ಎಂದರ್ಥವಾಗಿದೆ. ಇದು ಯಾವ "ಕಾಲವನ್ನು" ಸೂಚಿಸುತ್ತದೆಂದು ಸ್ಪಷ್ಟಪಡಿಸುವುದಕ್ಕಾಗಿ, ನೀವು ಇದನ್ನು, "ಅವರು 40 ವರ್ಷಗಳ ಕಾಲ ಮರುಭೂಮಿಯಲ್ಲಿ ಅಲೆದಾಡಿದ ನಂತರ ದೇವರು ಅಂತಿಮವಾಗಿ ಅನುಮತಿಯನ್ನು ಕೊಟ್ಟನು" ಎಂದು ಹೇಳಬಹುದು.

ಕಾನಾನ್ಯ ಪಟ್ಟಣವಾದ ಯೆರಿಕೋವಿಗೆ ಇಬ್ಬರು ಗೂಢಚಾರರು

ಇದನ್ನು "ಕಾನಾನಿನಲ್ಲಿರುವ ಯೆರಿಕೋ ಪಟ್ಟಣದ ಬಗ್ಗೆ ಮಾಹಿತಿ ಪಡೆಯಲು ಇಬ್ಬರು ಪುರುಷರನ್ನು ಅಲ್ಲಿಗೆ ಕಳುಹಿಸಲಾಯಿತು" ಎಂದು ಅನುವಾದಿಸಬಹುದು. 14:04 ರಲ್ಲಿರುವ "ದೇಶದಲ್ಲಿ ಗುಪ್ತಚಾರ ಕಾರ್ಯ ನಡೆಸಲು" ಎಂಬುದರ ಟಿಪ್ಪಣಿಗಳನ್ನು ಸಹ ನೋಡಿರಿ.

ಬಲವಾದ ಗೋಡೆಗಳಿಂದ ಭದ್ರಪಡಿಸಲಾಗಿತ್ತು

ಇದನ್ನು "ತಮ್ಮ ವೈರಿಗಳಿಂದ ತಮ್ಮನ್ನು ರಕ್ಷಿಸಿಕೊಳ್ಳಲು ಕಲ್ಲಿನಿಂದ ಮಾಡಲ್ಪಟ್ಟಿರುವಂಥ ದಪ್ಪವಾದ, ಬಲವಾದ ಗೋಡೆಗಳಿಂದ ಸಂಪೂರ್ಣವಾಗಿ ಸುತ್ತುವರಿಯಲ್ಪಟ್ಟಿದೆ" ಎಂದು ಅನುವಾದಿಸಬಹುದು.

ತಪ್ಪಿಸಿಕೊಂಡರು

"ತಮಗೆ ಹಾನಿಮಾಡಲು ಬಯಸಿದ ಯೆರಿಕೋವಿನ ಜನರಿಂದ ತಪ್ಪಿಸಿಕೊಂಡರು" ಎಂದು ಕೂಡ ಸೇರಿಸುವುದು ಸಾಧ್ಯತೆಯಿದೆ.

ಅವಳ ಕುಟುಂಬ

ರಾಹಾಬಳು ತನ್ನ ತಂದೆ, ತಾಯಿ, ಸಹೋದರರ, ಮತ್ತು ಸಹೋದರಿಯರ ಸಂರಕ್ಷಣೆಗಾಗಿ ಕೇಳಿಕೊಂಡಳು. ಈ ಜನರನ್ನು ಒಳಗೊಂಡಿರುವಂಥ ಕುಟುಂಬಕ್ಕೆ ಬಳಸುವಂಥ ನಿಮ್ಮ ಭಾಷೆಯ ಪದವನ್ನು ಬಳಸಿರಿ.

ಅನುವಾದದ ಪದಗಳು