kn_obs-tn/content/14/12.md

2.4 KiB

ಅದ್ಭುತಕರವಾಗಿ ಅವರಿಗೆ ಬಂಡೆಯಿಂದ ನೀರನ್ನು ಕೊಟ್ಟನು

ಇದನ್ನು, "ದೇವರು ಮಾತ್ರವೇ ಮಾಡಬಲ್ಲಂಥದ್ದನ್ನು ಮಾಡುವ ಮೂಲಕ, ಜನರು ಮತ್ತು ಪ್ರಾಣಿಗಳು ಕುಡಿಯಲಾಗುವಂತೆ ಬಂಡೆಯಿಂದ ನೀರು ಹರಿಯುವಂತೆ ಆತನು ಮಾಡಿದನು" ಎಂದು ಅನುವಾದಿಸಬಹುದು.

ಆದರೆ ಇದೆಲ್ಲದರ ಹೊರತಾಗಿಯೂ

ಇದನ್ನು, "ದೇವರು ಆಹಾರವನ್ನು, ನೀರನ್ನು, ಬಟ್ಟೆಯನ್ನು ಮತ್ತು ಅಗತ್ಯವಿರುವ ಎಲ್ಲವನ್ನೂ ಒದಗಿಸಿಕೊಟ್ಟರೂ ಸಹ" ಎಂದು ಅನುವಾದಿಸಬಹುದು

ಆದಾಗ್ಯೂ

ಇದನ್ನು, "ಇಸ್ರಾಯೇಲರು ಆತನಿಗೆ ವಿರೋಧವಾಗಿ ದೂರು ಹೇಳಿದರೂ ಮತ್ತು ಗೊಣಗುಟ್ಟಿದರೂ" ಎಂದು ಅನುವಾದಿಸಬಹುದು.

ದೇವರು ಇನ್ನೂ ತನ್ನ ವಾಗ್ದಾನಗಳಿಗೆ ನಂಬಿಗಸ್ತನಾಗಿದ್ದನು

ಇದನ್ನು, "ದೇವರು ಅಬ್ರಹಾಮ, ಇಸಾಕ, ಮತ್ತು ಯಾಕೋಬರಿಗೆ ತಾನು ಏನು ಮಾಡುತ್ತೇನೆ ಎಂದು ಹೇಳಿದನೋ ಅದನ್ನು ಮಾಡುವುದನ್ನು ಆತನು ಮುಂದುವರಿಸಿದನು" ಎಂದು ಅನುವಾದಿಸಬಹುದು. ಅವರು ಬದುಕಲು ಮತ್ತು ದೊಡ್ಡ ಜನಾಂಗವಾಗಲು ಮತ್ತು ಅಂತಿಮವಾಗಿ ಕಾನಾನ್‌ ದೇಶವನ್ನು ಸ್ವಾಧೀನಪಡಿಸಿಕೊಳ್ಳಲು ಆಗುವಂತೆ ಅವರಿಗೆ ಅಗತ್ಯವಾದದ್ದನ್ನು ಅವರ ಸಂತತಿಯವರಿಗೆ ಆತನು ಒದಗಿಸಿಕೊಟ್ಟನು.

ಅನುವಾದದ ಪದಗಳು