kn_obs-tn/content/14/11.md

2.6 KiB

ದೇವರು ಅವರಿಗೆ ಒದಗಿಸಿಕೊಟ್ಟನು

ಇದನ್ನು "ದೇವರು ಅವರಿಗೆ ಆಹಾರಕ್ಕೆ, ನೀರಿಗೆ ಮತ್ತು ಆಶ್ರಯಕ್ಕಾಗಿ ಬೇಕಾದ ಎಲ್ಲವನ್ನೂ ಕೊಟ್ಟನು" ಎಂದು ಅನುವಾದಿಸಬಹುದು.

ಆಕಾಶದಿಂದ “ಮನ್ನ” ಎಂದು ಕರೆಯಲ್ಪಡುವ ಆಹಾರವನ್ನು ಅಥವಾ ರೊಟ್ಟಿಯನ್ನು ಕೊಟ್ಟನು

ಈ ತೆಳ್ಳಗಿನ, ರೊಟ್ಟಿ ತರಹದ ಆಹಾರವು ರಾತ್ರಿಯಲೆಲ್ಲಾ ಹಿಮದಂತೆ ಹುಲ್ಲಿನ ಮೇಲೆ ಬೀಳುತ್ತಿತ್ತು. ಅವರು ಅದನ್ನು "ಮನ್ನ" ಎಂದು ಕರೆದರು. ಪ್ರತಿದಿನವು ಜನರು ಈ "ಮನ್ನ" ವನ್ನು ಕೂಡಿಸಿಕೊಳ್ಳುತ್ತಿದ್ದರು ಮತ್ತು ತಮ್ಮ ಆಹಾರಕ್ಕಾಗಿ ಅದನ್ನು ಬೇಯಿಸುತ್ತಿದ್ದರು.

ಆತನು ಲಾವಕ್ಕಿಗಳ ಹಿಂಡುಗಳನ್ನು ಸಹ ಕಳುಹಿಸಿದನು... ಪಾಳೆಯಕ್ಕೆ

ಇದನ್ನು ಇನ್ನೊಂದು ರೀತಿಯಲ್ಲಿ ಹೀಗೂ ಹೇಳಬಹುದು, "ಭಾರಿ ಪ್ರಮಾಣದಲ್ಲಿ ಲಾವಕ್ಕಿಗಳು ಅವರ ಪಾಳೆಯಕ್ಕೆ ಹಾರಿಬರುವಂತೆ ಆತನು ಮಾಡಿದನು." ಲಾವಕ್ಕಿಗಳ ಬಗ್ಗೆ ತಿಳಿದಿಲ್ಲವಾದರೆ , ವಿಭಿನ್ನವಾದ, ಸಮಾನವಾದ ರೀತಿಯ ಪಕ್ಷಿಗಳನ್ನು ಬಳಸಬಹುದು. ಅಥವಾ ಅದನ್ನು "ಮಧ್ಯಮ ಗಾತ್ರದ ಪಕ್ಷಿಗಳ ಬೃಹತ್‌ ಪ್ರಮಾಣ" ಎಂದು ಅನುವಾದಿಸಬಹುದು.

ಅವರ ಪಾಳೆಯ

ಇಸ್ರಾಯೇಲ್ಯರು ನಿದ್ರೆ ಮಾಡುವುದಕ್ಕಾಗಿ ಹಾಕಿಕೊಂಡಿದ್ದ ಗುಡಾರಗಳಿರುವಂಥ ಸ್ಥಳವನ್ನು "ಪಾಳೆಯ" ಎಂದು ಕರೆಯಲಾಯಿತು. ಇದು ಕಟ್ಟಡಗಳ ಬದಲಿಗೆ ಗುಡಾರಗಳು ಇರುವಂಥ ಪಟ್ಟಣದಂತೆ ಇತ್ತು, ಮತ್ತು ಅದನ್ನು ಒಂದು ಕಡೆಯಿಂದ ಇನ್ನೊಂದು ಕಡೆಗೆ ಸ್ಥಳಾಂತರಿಸಬಹುದಿತ್ತು.

ಅನುವಾದದ ಪದಗಳು