kn_obs-tn/content/14/09.md

1.9 KiB

ಅವರು ಪಾಪಮಾಡಿದರು

ಕಾನಾನಿನ ಜನರನ್ನು ವಶಪಡಿಸಿಕೊಳ್ಳಬೇಕೆಂಬ ದೇವರ ಆಜ್ಞೆಗೆ ಅವಿಧೇಯರಾಗುವ ಮೂಲಕ ಅವರು ಪಾಪ ಮಾಡಿದರು" ಎಂದು ಸೇರಿಸುವುದು ಅನಿವಾರ್ಯವಾಗಿರಬಹುದು.

ಮೋಶೆಯು ಅವರಿಗೆ ಹೋಗಬೇಡಿರಿ ಎಂದು ಎಚ್ಚರಿಸಿದನು

ಇದರ ಅರ್ಥವೇನೆಂದರೆ ಕಾನಾನ್ಯರಿಗೆ ವಿರುದ್ಧವಾಗಿ ಯುದ್ಧ ಮಾಡಬಾರದೆಂದು ಮೋಶೆಯು ಅವರಿಗೆ ಹೇಳಿದನು ಏಕೆಂದರೆ ಅವರು ಹಾಗೆ ಮಾಡಿದ್ದರೆ ಅಪಾಯದಲ್ಲಿ ಬೀಳುತ್ತಿದ್ದರು.

ದೇವರು ಅವರೊಂದಿಗೆ ಇರಲಿಲ್ಲ

ಬೇರೆ ರೀತಿಯಲ್ಲಿ ಹೇಳುವುದಾದರೆ, ಅವರಿಗೆ ಸಹಾಯ ಮಾಡಲು ದೇವರು ಅವರೊಂದಿಗೆ ಇರುವುದಿಲ್ಲ. ಇಸ್ರಾಯೇಲರ ಅವಿಧೇಯತೆಯ ನಿಮಿತ್ತವಾಗಿ ದೇವರು ತನ್ನ ಪ್ರಸನ್ನತೆಯನ್ನು, ಸಂರಕ್ಷಣೆಯನ್ನು ಮತ್ತು ಶಕ್ತಿಯನ್ನು ಹಿಂತೆಗೆದುಕೊಂಡನು.

ಆದರೆ ಅವರು ಆತನಿಗೆ ಕಿವಿಗೊಡಲಿಲ್ಲ

ಅವರು ಮೋಶೆಗೆ ವಿಧೇಯರಾಗಲಿಲ್ಲ. ಹಾಗೂ ಅವರು ಕಾನಾನ್ಯರ ಮೇಲೆ ಯುದ್ಧಮಾಡಲು ಹೊರಟುಹೋದರು.

ಅನುವಾದದ ಪದಗಳು