kn_obs-tn/content/13/09.md

2.4 KiB

ದೇವರ ನಿಯಮ

ಇದು ಇಸ್ರಾಯೇಲರಿಗೆ ವಿಧೇಯರಾಗಬೇಕೆಂದು ದೇವರು ಹೇಳಿದ ಎಲ್ಲಾ ಆಜ್ಞೆಗಳನ್ನು ಮತ್ತು ಆದೇಶಗಳನ್ನು ಸೂಚಿಸುತ್ತದೆ.

ದೇವದರ್ಶನ ಗುಡಾರಕ್ಕೆ

ದೇವದರ್ಶನ ಗುಡಾರದೊಳಕ್ಕೆ ಅವರು ಪ್ರಾಣಿಗಳನ್ನು ತೆಗೆದುಕೊಂಡು ಬರಲಿಲ್ಲ, ಆದರೆ ದೇವದರ್ಶನ ಗುಡಾರದ ಮುಂಭಾಗದಲ್ಲಿರುವ ಯಜ್ಞವೇದಿಯ ಬಳಿಗೆ ತೆಗೆದುಕೊಂಡು ಬರುತ್ತಿದ್ದರು. ಒಳಕ್ಕೆ ತೆಗೆದುಕೊಂಡು ಬಂದರು ಎಂಬ ಅರ್ಥವನ್ನು ಕೊಡುವಂಥ ಪದಗುಚ್ಛವನ್ನು ಬಳಸಬೇಡಿರಿ.

ವ್ಯಕ್ತಿಯ ಪಾಪವನ್ನು ಮುಚ್ಚಿತ್ತು

ಜನರು ಯಜ್ಞಮಾಡಲು ಪ್ರಾಣಿಗಳನ್ನು ತಂದಾಗ, ಪ್ರಾಣಿಗಳ ರಕ್ತವು ಅವರ ಪಾಪವನ್ನು ಮುಚ್ಚಿರುವಂಥ ಹೊದಿಕೆಯಂತೆ ನೋಡಲು ದೇವರು ನಿರ್ಣಯಿಸಿಕೊಂಡನು. ಇದು ಅಸಹ್ಯವಾದ ಅಥವಾ ಕೊಳಕಾದ ಸಂಗತಿಯನ್ನು ಮರೆಮಾಡುವ ಮೂಲಕ ಅದು ಮುಚ್ಚುವಂಥ ರೀತಿಯಲ್ಲಿರುತ್ತದೆ.

ದೇವರ ದೃಷ್ಟಿಯಲ್ಲಿ ಶುದ್ಧ

ಇದನ್ನು "ಅವನು ದೇವರ ಪ್ರಕಾರವಾಗಿ ಪಾಪವಿಲ್ಲದವನ ರೀತಿಯಲ್ಲಿ" ಅಥವಾ "ದೇವರ ನಿಯಮವನ್ನು ಉಲ್ಲಂಘಿಸಿದ್ದರ ಶಿಕ್ಷೆಯಿಂದ ಬಿಡುಗಡೆ" ಎಂದು ಅನುವಾದಿಸಬಹುದು.

ಅನುವಾದದ ಪದಗಳು