kn_obs-tn/content/13/05.md

2.6 KiB

ಸಾಮಾನ್ಯ ಮಾಹಿತಿ

ದೇವರು ಮೋಶೆಯೊಂದಿಗೆ ಮಾತನಾಡುವುದನ್ನು ಮುಂದುವರಿಸಿದನು

ಯೆಹೋವನಾದ ನಾನು ಹೊಟ್ಟೆಕಿಚ್ಚು ಪಡುವ ದೇವರು

ಇದನ್ನು, "ಯೆಹೋವನಾದ ನಾನು, ನೀವು ನನ್ನನ್ನು ಹೊರತುಪಡಿಸಿ ಬೇರೆ ಯಾವುದನ್ನಾದರೂ ಆರಾಧಿಸಿದರೆ ಅಥವಾ ಗೌರವಿಸಿದರೆ ಕೋಪಗೊಳ್ಳುವೆನು" ಎಂದು ಅನುವಾದಿಸಬಹುದು. ದೇವರು ತನ್ನ ಜನರು ಬೇರೆ ಯಾವುದಕ್ಕಿಂತಲೂ ಅಥವಾ ಬೇರೆಎಲ್ಲರಿಗಿಂತಲೂ ತನನ್ನು ಹೆಚ್ಚಾಗಿ ಪ್ರೀತಿಸಬೇಕು, ಸೇವಿಸಬೇಕು, ಮತ್ತು ಅನುಸರಿಸಬೇಕು ಎಂದು ಬಲವಾಗಿ ಅಪೇಕ್ಷಿಸುತ್ತಾನೆ. ಆತನು ಮಾತ್ರವೇ ಅವರ ಜೀವನದ ಏಕೈಕ ಯಜಮಾನನಾಗಿರಬೇಕು ಎಂದು ಬಯಸುತ್ತಾನೆ.

ಅಗೌರವ ತರುವ ಕಾರ್ಯಗಳಿಗೆ ನನ್ನ ಹೆಸರನ್ನು ಬಳಸಬಾರದು,

ಇದನ್ನು "ನನ್ನ ವಿಷಯದಲ್ಲಿ ಗೌರವವನ್ನು ಮತ್ತು ಘನತೆಯನ್ನು ತೋರಿಸದ ರೀತಿಯಲ್ಲಿ ಮಾತನಾಡಬೇಡಿರಿ" ಅಥವಾ "ನನಗೆ ಸರಿಯಾದ ಗೌರವವನ್ನು ಮತ್ತು ಘನತೆಯನ್ನು ನೀಡುವ ರೀತಿಯಲ್ಲಿ ನನ್ನ ವಿಷಯದಲ್ಲಿ ಮಾತನಾಡಿರಿ" ಎಂದು ಅನುವಾದಿಸಬಹುದು.

ಏಳನೆಯ ದಿನ

ವಾರದ ನಿರ್ದಿಷ್ಟವಾದ ದಿನದ ಹೆಸರನ್ನು ನೀಡುವ ಬದಲು ಸಂಖ್ಯೆಯನ್ನು ("ಏಳನೇ") ಬಳಸುವುದು ಉತ್ತಮವಾದ ಅನುವಾದವಾಗಿರುತ್ತದೆ.

ನನ್ನನ್ನು ನೆನಪಿಸಿಕೊಳ್ಳಲು

ಇದನ್ನು "ನನ್ನನ್ನು ಸ್ಮರಿಸಲು" ಅಥವಾ "ನನ್ನನ್ನು ಗೌರವಿಸಲು" ಎಂದು ಅನುವಾದಿಸಬಹುದು.

ಅನುವಾದದ ಪದಗಳು