kn_obs-tn/content/13/03.md

2.5 KiB

ಮೂರು ದಿನಗಳಾದ ನಂತರ

ಅವರು ಸಿನಾಯಿ ಪರ್ವತದ ಬಳಿಗೆ ಬಂದು ಮತ್ತು ದೇವರು ಅವರೊಂದಿಗೆ ಮೊದಲ ಬಾರಿಗೆ ಮಾತನಾಡಿ ಮೂರು ದಿನಗಳಾದ ನಂತರ ಎಂದು ಬೇರೆ ರೀತಿಯಲ್ಲಿ ಹೇಳಬಹುದು.

ಆತ್ಮೀಕವಾಗಿ ತಮ್ಮನ್ನು ತಾವು ಸಿದ್ಧಪಡಿಸಿಕೊಂಡರು

ಇದು ದೇವರನ್ನು ಭೇಟಿಯಾಗಲು ಇರುವಂಥ ಸಿದ್ಧತೆಯಲ್ಲಿರುವಂಥ ವಿಧ್ಯುಕ್ತವಾದ ಶುದ್ಧೀಕರಣವನ್ನು ಸೂಚಿಸುತ್ತದೆ. "ದೇವರನ್ನು ಭೇಟಿಯಾಗಲು ಸಿದ್ಧರಾದರು" ಅಥವಾ "ದೇವರನ್ನು ಭೇಟಿ ಮಾಡಲು ತಮ್ಮನ್ನು ಸಿದ್ಧಪಡಿಸಿಕೊಂಡರು" ಎಂದು ಇದನ್ನು ಅನುವಾದಿಸಬಹುದು.

ತುತ್ತೂರಿಯ ಜೋರಾದ ಶಬ್ದ

"ಕೊಂಬಿನಿಂದ ಉಂಟಾದ ಜೋರಾದ ಶಬ್ದ" ಅಥವಾ "ಕೊಂಬನ್ನು ಊದಲಾಯಿತು ಮತ್ತು ಅದು ಜೋರಾದ ಶಬ್ದವನ್ನು ಉಂಟುಮಾಡಿತ್ತು" ಅಥವಾ "ಊದಿದ್ದ ಕೊಂಬಿನ ಜೋರಾದ ಶಬ್ದವನ್ನು ಅವರು ಕೇಳಿಸಿಕೊಂಡರು" ಎಂದು ಅನುವಾದಿಸಬಹುದು. ತುತ್ತೂರಿಗಳನ್ನು ಟಗರಿನ ಕೊಂಬುಗಳಿಂದ ಮಾಡಲಾಗಿತ್ತು. ಆ ದಿನದಲ್ಲಿ ಜನರನ್ನು ಪರ್ವತದ ಬಳಿಗೆ ಸೇರಿಸಲು ಮತ್ತು ದೇವರನ್ನು ಭೇಟಿ ಮಾಡಲು ಕರೆಯುವುದಕ್ಕಾಗಿ ಅವುಗಳನ್ನು ಬಳಸಲಾಯಿತು.

ಮೋಶೆಗೆ ಮಾತ್ರ ಮೇಲಕ್ಕೆ ಹೋಗಲು ಅನುಮತಿ ನೀಡಲಾಗಿತ್ತು

ಇದನ್ನು, "ಮೇಲಕ್ಕೆ ಹೋಗಲು ದೇವರು ಮೋಶೆಗೆ ಅನುಮತಿ ಕೊಟ್ಟನು, ಆದರೆ ಮೇಲಕ್ಕೆ ಹೋಗಲು ಬೇರೆ ಯಾರಿಗೂ ಆತನು ಅನುಮತಿ ಕೊಡಲಿಲ್ಲ" ಎಂದು ಅನುವಾದಿಸಬಹುದು.

ಅನುವಾದದ ಪದಗಳು