kn_obs-tn/content/12/14.md

2.5 KiB

ಪಸ್ಕ (ಪಾಸೋವರ್)

ಇದನ್ನು "ಪಾಸೋವರ್ (ಪಸ್ಕದ) ಚಟುವಟಿಕೆಗಳು" ಅಥವಾ "ಪಾಸೋವರ್ ಆಚರಣೆ" ಅಥವಾ "ಪಾಸೋವರ್ ಭೋಜನ" ಎಂದು ಅನುವಾದಿಸಬಹುದು.

ದೇವರು ಅವರಿಗೆ ಜಯವನ್ನು ಹೇಗೆ ನೀಡಿದ್ದಾನೆಂಬುದನ್ನು ಸ್ಮರಿಸುವುದು

ಇದನ್ನು "ದೇವರು ಹೇಗೆ ಸೋಲಿಸಿದನೆಂಬುದನ್ನು ನಿಯಮಿತವಾಗಿ ನೆನಪಿಸಿಕೊಳ್ಳುವುದು" ಎಂದು ಅನುವಾದಿಸಬಹುದು. ಇದರಲ್ಲಿರುವ "ನೆನಪಿಸಿಕೊಳ್ಳಿರಿ" ಎಂಬ ಪದವು ಕೇವಲ ಮರೆತುಬಿಡಬಾರದು ಎಂಬರ್ಥವನ್ನು ಮಾತ್ರ ಕೊಡುವುದಿಲ್ಲ; ಇದು ಔಪಚಾರಿಕವಾಗಿ ಏನಾದರೊಂದನ್ನು ನೆನಪಿಸಿಕೊಳ್ಳುವುದು ಎಂಬ ಅರ್ಥವಾಗಿದೆ.

ಪೂರ್ಣಾಂಗವಾದ ಕುರಿಮರಿ

ಇದರಲ್ಲಿರುವ "ಪೂರ್ಣ" ಎಂಬ ಪದವು ಯಾವುದೇ ಕಾಯಿಲೆಯಿಲ್ಲದ ಅಥವಾ ಯಾವುದೇ ಕುಂದು ಇಲ್ಲದ ಕುರಿಮರಿಯನ್ನು ಸೂಚಿಸುತ್ತದೆ. ಇದನ್ನು ಮತ್ತೊಂದು ರೀತಿಯಲ್ಲಿ ಹೀಗೂ ಹೇಳಬಹುದು, "ಪೂರ್ಣವಾಗಿ ಆರೋಗ್ಯಕರವಾದ ಮತ್ತು ಉತ್ತಮವಾಗಿರುವ ಕುರಿಮರಿ."

ಹುಳಿಯಿಲ್ಲದೇ ಮಾಡಿದ ರೊಟ್ಟಿ

ಇದನ್ನು ಇನ್ನೊಂದು ರೀತಿಯಲ್ಲಿ ಹೀಗೂ ಹೇಳಬಹುದು, "ಹುಳಿಯಿಲ್ಲದ ರೊಟ್ಟಿ." 11:03 ರಲ್ಲಿ ನೀವು ಇದನ್ನು ಹೇಗೆ ಅನುವಾದಿಸಿದ್ದೀರಿ ಎಂಬುದನ್ನು ನೋಡಿರಿ.

ಇದೊಂದು ಸತ್ಯವೇದದ ಕಥೆ

ಸತ್ಯವೇದದ ಕೆಲವು ಭಾಷಾಂತರಗಳಲ್ಲಿ ಈ ಉಲ್ಲೇಖಗಳು ಸ್ವಲ್ಪ ವ್ಯತ್ಯಾಸವಾಗಿರುತ್ತವೆ.

ಅನುವಾದದ ಪದಗಳು