kn_obs-tn/content/12/11.md

2.0 KiB

ಆಚೆ ದಡಕ್ಕೆ ಸುರಕ್ಷಿತವಾಗಿ ಹೋದರು

ಇದನ್ನು "ಆಚೆ ದಡಕ್ಕೆ ಸುರಕ್ಷಿತವಾಗಿ ನಡೆದುಕೊಂಡು ಹೋದರು" ಅಥವಾ "ಆಚೆ ದಡಕ್ಕೆ ಸುರಕ್ಷಿತವಾಗಿ ಬಂದು ತಲುಪಿದರು" ಅಥವಾ "ಆಚೆ ದಡಕ್ಕೆ ನಡೆದುಕೊಂಡು ಹೋದರು ಮತ್ತು ಈಜಿಪ್ಟಿನವರಿಂದ ಹಾಗೂ ಸಮುದ್ರದಿಂದ ಪಾರಾಗಿ ಸುರಕ್ಷಿತರಾಗಿದ್ದರು" ಎಂದು ಅನುವಾದಿಸಬಹುದು.

ಮತ್ತೇ ಅವನ ಕೈಯನ್ನು ಚಾಚಿದನು

"ಸಮುದ್ರದ ಮೇಲೆ ಮತ್ತೇ ತನ್ನ ಕೈಯನ್ನು ಎತ್ತಿದನು" ಅಥವಾ ದೇವರು ಮೋಶೆಗೆ, 'ನಿನ್ನ ಕೈಯನ್ನು ಮತ್ತೆ ಚಾಚುʼ ಎಂದು ಹೇಳಿದನು" ಎಂಬ ನೇರವಾದ ಆಜ್ಞೆವಾಕ್ಯದ ರೀತಿಯಲ್ಲಿ ಇದನ್ನು ಅನುವಾದಿಸಬಹುದು

ಸಹಜ ಸ್ಥಿತಿಗೆ ಮರಳಿತು

ಇದನ್ನು "ದಾರಿ ಇದ್ದಂಥ ಸ್ಥಳವನ್ನು ಪುನಃ ಮುಚ್ಚಿಬಿಟ್ಟಿತು" ಅಥವಾ "ಮತ್ತೆ ಇಡೀ ಸಮುದ್ರವು ತುಂಬಿಕೊಂಡಿತ್ತು" ಅಥವಾ "ದೇವರು ಅದನ್ನು ಇಬ್ಭಾಗಿಸುವ ಮುನ್ನ ಇದ್ದ ರೀತಿಗೆ ಮರಳಿತು" ಎಂದು ಅನುವಾದಿಸಬಹುದು.

ಇಡೀ ಈಜಿಪ್ಟಿನ ಸೈನ್ಯ

ಇದನ್ನು "ಈಜಿಪ್ಟಿನ ಸೈನ್ಯದಲ್ಲಿದ್ದ ಪ್ರತಿಯೊಬ್ಬನೂ" ಎಂದು ಅನುವಾದಿಸಬಹುದು.

ಅನುವಾದದ ಪದಗಳು