kn_obs-tn/content/10/02.md

2.0 KiB

ಜನರು

ಇದು "ಇಸ್ರಾಯೇಲರು" ಎಂದು ಕರೆಯಲ್ಪಡುವ ಇಸ್ರಾಯೇಲ್ ಜನರನ್ನು ಸೂಚಿಸುತ್ತದೆ.

ಭಯಾನಕವಾದ ಹತ್ತು ಬಾಧೆಗಳು

ಬಾಧೆ ಎಂದರೆ ಯಾರಿಗಾದರೂ ಅಥವಾ ಯಾವುದಕ್ಕಾದರೂ ಸಂಭವಿಸುವಂಥ ಹಾನಿಕರವಾದ ಅಥವಾ ಭಯಾನಕವಾದ ಸಂಗತಿಯಾಗಿದೆ. ಬಾಧೆ ನೋವು ತೊಂದರೆ ಎಂಬುದು ಸಾಮಾನ್ಯವಾಗಿ ಹೆಚ್ಚಿನ ಜನರ ಮೇಲೆ ಪರಿಣಾಮ ಬೀರುವಂಥ ಅಥವಾ ಬೃಹತ್ ಭೌಗೋಳಿಕ ಪ್ರದೇಶದ ಮೇಲೆ ಸಂಭವಿಸುವ ಸಂಗತಿಯನ್ನು ಸೂಚಿಸುವಂಥದ್ದಾಗಿದೆ. "ವಿಪತ್ತು" ಎಂಬ ಪದವು "ಬಾಧೆ" ಎಂಬ ಪದಕ್ಕಿರುವಂಥ ಇನ್ನೊಂದು ಪದವಾಗಿರುತ್ತದೆ.

ಈಜಿಪ್ಟಿನ ಎಲ್ಲಾ ದೇವರುಗಳು

"ಈಜಿಪ್ಟಿನ ಜನರು ಪೂಜಿಸುತ್ತಿದ್ದ ಎಲ್ಲಾ ದೇವರುಗಳು" ಎಂದು ಹೇಳುವುದು ಹೆಚ್ಚು ಸ್ಪಷ್ಟವಾಗಿರಬಹುದು. ಈಜಿಪ್ಟಿನ ಜನರು ಅನೇಕ ಸುಳ್ಳು ದೇವರುಗಳನ್ನು ಪೂಜಿಸುತ್ತಿದ್ದರು. ಈ ಸುಳ್ಳಾದ ದೇವರುಗಳು ಇಸ್ರಾಯೇಲಿನ ದೇವರು ಸೃಷ್ಟಿಸಿದ ಆತ್ಮ ಜೀವಿಗಳಾಗಿರಬಹುದು, ಅಥವಾ ವಾಸ್ತವವಾಗಿ ಅವುಗಳು ಅಸ್ತಿತ್ವದಲ್ಲಿ ಇಲ್ಲದಿರಬಹುದು.

ಅನುವಾದದ ಪದಗಳು