kn_obs-tn/content/09/13.md

2.1 KiB

ನನ್ನ ಜನರ ಕಷ್ಟವನ್ನು

ಇದನ್ನು, "ನನ್ನ ಜನರು ಅನುಭವಿಸುತ್ತಿರುವ ಅತ್ಯಂತ ಕಠಿಣವಾದ ಕಷ್ಟವನ್ನು” ಎಂದು ಅನುವಾದಿಸಬಹುದು. ಕೆಲವು ಭಾಷೆಗಳಲ್ಲಿ ಇದನ್ನು, “ಈಜಿಪ್ಟಿನವರು ಹೇಗೆ ನನ್ನ ಜನರಿಗೆ ಭಯಾನಕ ನೋವನ್ನು ಕೊಡುತ್ತಿದ್ದಾರೆ” ಎಂದು ಅನುವಾದಿಸಬಹುದು

ನನ್ನ ಜನರು

ಇದು ಇಸ್ರಾಯೇಲ್ಯರನ್ನು ಸೂಚಿಸುತ್ತದೆ. ಆತನು ಅವರನ್ನು ಆಶೀರ್ವದಿಸಿ ಅವರನ್ನು ದೊಡ್ಡ ಜನಾಂಗವಾಗಿ ಮಾಡುವೆನೆಂದು ದೇವರು ಅಬ್ರಹಾಮನೊಂದಿಗೂ ಮತ್ತು ಅವನ ಸಂತತಿಯವರೊಂದಿಗೂ ಒಡಂಬಡಿಕೆಯನ್ನು ಮಾಡಿಕೊಂಡಿದ್ದನು. ಈ ಒಡಂಬಡಿಕೆಯ ಮೂಲಕ ಇಸ್ರಾಯೇಲ್ಯರು ದೇವರ ಸ್ವಕೀಯ ಜನರಾದರು.

ಈಜಿಪ್ಟಿನಲ್ಲಿರುವ ಅವರ ಗುಲಾಮಗಿರಿಯಿಂದ … ಹೊರಗೆ ಬರಮಾಡು

ಇದನ್ನು "ಈಜಿಪ್ಟಿನಲ್ಲಿ ಗುಲಾಮರಾಗಿರುವ ಅವರನ್ನು ಬಿಡಿಸು" ಅಥವಾ "ಈಗ ಅವರು ಗುಲಾಮರಾಗಿರುವ ಈಜಿಪ್ಟಿನಿಂದ ಅವರನ್ನು ಹೊರಗೆ ಕರೆದುಕೊಂಡು ಬಾ" ಎಂದು ಅನುವಾದಿಸಬಹುದು.

ಅನುವಾದದ ಪದಗಳು