kn_obs-tn/content/09/12.md

2.7 KiB

ಅವನ ಕುರಿಗಳನ್ನು ಮೇಯಿಸುತ್ತಿದ್ದನು

ಇದರರ್ಥ ಕುರಿಗಳನ್ನು ಹುಲ್ಲಿನ ಮತ್ತು ನೀರಿನ ಬಳಿಗೆ ನಡೆಸುವಂಥ ಮತ್ತು ಅವುಗಳನ್ನು ಸಂರಕ್ಷಿಸುವಂಥ ಕೆಲಸವನ್ನು ಮಾಡುತ್ತಿದ್ದನು ಅಂದರೆ ಅವನು ಕುರುಬನ ಕೆಲಸವನ್ನು ಮಾಡುತ್ತಿದ್ದನು. ಇದನ್ನು "ಕುರಿಗಳನ್ನು ಕಾಯುತ್ತಿದ್ದನು" ಎಂದು ಅನುವಾದಿಸಬಹುದು.

ಪೊದೆಯು ಸುಟ್ಟು ಹೋಗಲಿಲ್ಲ

ದೇವರು ಪೊದೆಯ ಬೆಂಕಿಯನ್ನು ಹೆಚ್ಚಾಗಿ ಉರಿಯುವಂತೆ ಮಾಡಿದನು, ಆದರೆ ಬೆಂಕಿಯು ಪೊದೆಯನ್ನು ಹಾಳುಮಾಡಲಿಲ್ಲ.

ದೇವರ ಸ್ವರವು ಹೀಗೆ ನುಡಿಯಿತು

ಇದನ್ನು "ದೇವರು ಗಟ್ಟಿಯಾಗಿ ಹೇಳಿದನು" ಎಂದು ಅನುವಾದಿಸಬಹುದು. ದೇವರು ಮಾತನಾಡುವುದನ್ನು ಮೋಶೆಯು ಕೇಳಿಸಿಕೊಂಡನು, ಆದರೆ ಅವನು ದೇವರನ್ನು ನೋಡಲಿಲ್ಲ.

ನಿನ್ನ ಕೆರಗಳನ್ನು ತೆಗೆದುಹಾಕು

ಅವನು ದೇವರನ್ನು ಹೆಚ್ಚು ಗೌರವಿಸುತ್ತಾನೆಂದು ತೋರ್ಪಡಿಸಲು ಅವನ ಪಾದರಕ್ಷೆಯನ್ನು ತೆಗೆದುಹಾಕಬೇಕೆಂದು ದೇವರು ಬಯಸಿದನು. ಇದರ ಕಾರಣವನ್ನು ಸ್ಪಷ್ಟಪಡಿಸಲು, "ನಿನ್ನ ಕೆರಗಳನ್ನು ತೆಗೆದುಹಾಕು, ಏಕೆಂದರೆ ನೀನು ನಿಂತಿರುವ ಸ್ಥಳವು ಪರಿಶುದ್ಧ ಸ್ಥಳವಾಗಿದೆ" ಎಂದು ನೀವು ಹೇಳಬಹುದು.

ಪರಿಶುದ್ಧ ಸ್ಥಳ

ದೇವರು ಸಾಧಾರಣವಾದ ಸ್ಥಳದಿಂದ ಅದನ್ನು ಪ್ರತ್ಯೇಕಿಸಿದನು ಮತ್ತು ಅದನ್ನು ತನ್ನನ್ನು ತಾನು ಪ್ರಕಟಿಸಿಕೊಳ್ಳುವಂತಹ ವಿಶೇಷ ಸ್ಥಳವನ್ನಾಗಿ ಮಾಡಿದನು ಈ ಅರ್ಥದಲ್ಲಿ ಅದು ಪರಿಶುದ್ಧ ಸ್ಥಳವಾಗಿದೆ.

ಅನುವಾದದ ಪದಗಳು