kn_obs-tn/content/08/15.md

3.0 KiB

ಒಡಂಬಡಿಕೆಯ ವಾಗ್ದಾನಗಳು

ಬಹಳ ಕಾಲದ ಹಿಂದೆಯೇ ದೇವರು ಅಬ್ರಹಾಮನೊಂದಿಗೆ ಒಪ್ಪಂದವನ್ನು ಮಾಡಿಕೊಂಡನು ಮತ್ತು ಅವನಿಗೆ ಅನೇಕ ಸಂತತಿಯನ್ನು ಕೊಡುವೆನೆಂದು ವಾಗ್ದಾನ ಮಾಡಿದನು; ಅವರು ಕಾನಾನ್ ದೇಶವನ್ನು ಸ್ವಾಧೀನಪಡಿಸಿಕೊಳ್ಳುವರು ಮತ್ತು ದೊಡ್ಡ ಜನಾಂಗವಾಗುವರು. ಅಬ್ರಹಾಮನ ವಂಶದ ಮೂಲಕವಾಗಿ ಎಲ್ಲಾ ಜನರು ಆಶೀರ್ವದಿಸಲ್ಪಡುವರು ಎಂದು ದೇವರು ವಾಗ್ದಾನ ಮಾಡಿದನು. ಇದನ್ನು ಸಹ ನೋಡಿರಿ 07:10.

ವರ್ಗಾಯಿಸಲಾಯಿತು

ಇದನ್ನು ಇನ್ನೊಂದು ರೀತಿಯಲ್ಲಿ ಹೀಗೂ ಹೇಳಬಹುದು, "ಹಸ್ತಾಂತರಿಸಲಾಯಿತು" ಅಥವಾ "ಕೊಡಲಾಯಿತು" ಅಥವಾ "ಅನ್ವಯವಾಗುತ್ತದೆ". ದೇವರು ಅಬ್ರಹಾಮನಿಗೆ ಮಾಡಿದ ವಾಗ್ದಾನವು ಅಬ್ರಹಾಮನ ಮಕ್ಕಳಿಗೆ, ಮೊಮ್ಮಕ್ಕಳಿಗೆ ಮತ್ತು ಅವನ ಉಳಿದ ಎಲ್ಲಾ ಸಂತತಿಯವರಿಗೂ ಸಹ ಇರುವಂತಹ ವಾಗ್ದಾನವಾಗಿದೆ. ಇದನ್ನು ಸಹ ನೋಡಿರಿ 06:04.

ಇಸ್ರಾಯೇಲಿನ ಹನ್ನೆರಡು ಕುಲಗಳು

ಅಬ್ರಹಾಮ, ಇಸಾಕ ಮತ್ತು ಯಾಕೋಬರಿಗೆ ಅವರ ಸಂತತಿಯವರು ದೊಡ್ಡ ಜನಾಂಗವಾಗುವರು ಎಂದು ದೇವರು ವಾಗ್ದಾನ ಮಾಡಿದ್ದನು. ದೇವರು ಅನಂತರದಲ್ಲಿ ಯಾಕೋಬನ ಹೆಸರನ್ನು ಇಸ್ರಾಯೇಲ್‌ ಎಂದು ಬದಲಾಯಿಸಿದನು. ಯಾಕೋಬನ 12 ಗಂಡು ಮಕ್ಕಳ ಸಂತತಿಯವರು 12 ಮಹಾ ಕುಲಗಳಾದರು. ಈ 12 ಕುಲಗಳಿಂದ ಇಸ್ರಾಯೇಲ್‌ ಎಂದು ಕರೆಯಲ್ಪಡುವ ಪ್ರಾಚೀನ ಜನಾಂಗವು ರೂಪಗೊಂಡಿತು, ಯಾಕೋಬನ ಹೊಸ ಹೆಸರಿನಿಂದ ಇದಕ್ಕೆ ಆ ಹೆಸರನ್ನು ಇಡಲಾಯಿತು.

ಇದೊಂದು ಸತ್ಯವೇದದ ಕಥೆ

ಸತ್ಯವೇದದ ಕೆಲವು ಭಾಷಾಂತರಗಳಲ್ಲಿ ಈ ಉಲ್ಲೇಖಗಳು ಸ್ವಲ್ಪ ವ್ಯತ್ಯಾಸವಾಗಿರುತ್ತವೆ.

ಅನುವಾದದ ಪದಗಳು