kn_obs-tn/content/08/12.md

3.5 KiB

ತನ್ನ ಸಹೋದರರನ್ನು ಪರೀಕ್ಷಿಸಿದನು

ಅವರು ತಮ್ಮ ಕಿರಿಯ ಸಹೋದರನನ್ನು ಕಾಪಾಡುವರೋ ಅಥವಾ ಅವರು ಯೋಸೇಫನೊಂದಿಗೆ ವರ್ತಿಸಿದಂತೆಯೇ ಅವನೊಂದಿಗೆ ಕೆಟ್ಟದಾಗಿ ನಡೆದುಕೊಳ್ಳುವರೂ ಎಂದು ನೋಡಲು ಯೋಸೇಫನು ತನ್ನ ಅಣ್ಣಂದಿರನ್ನು ಕಠಿಣವಾದ ಪರಿಸ್ಥಿತಿಗೆ ದೂಡಿದನು. ಅವರು ತಮ್ಮ ತಮ್ಮನನ್ನು ಕಾಪಾಡಿದಾಗ, ಅವರು ಬದಲಾಗಿದ್ದಾರೆ ಎಂದು ಯೋಸೇಫನು ತಿಳಿದುಕೊಂಡನು.

ಅವರು ಬದಲಾಗಿದ್ದರೆ

ಇದನ್ನು ಇನ್ನೊಂದು ರೀತಿಯಲ್ಲಿ ಹೀಗೂ ಹೇಳಬಹುದು, "ಅವರು ಮುಂಚೆ ಇದುದದಕ್ಕಿಂತ ವಿಭಿನ್ನವಾಗಿದ್ದರೆ." ವರ್ಷಗಳ ಹಿಂದೆ ಯೋಸೇಫನ ಸಹೋದರರು ಅವನನ್ನು ಗುಲಾಮಗಿರಿಗೆ ಮಾರಿಬಿಟ್ಟರು. ಈಗ ಅವರು ಸರಿಯಾದದುದನ್ನು ಮಾಡುತ್ತಾರೋ ಎಂದು ಕಂಡುಹಿಡಿಯಲು ಯೋಸೇಫನು ಬಯಸಿದನು.

ಭಯಪಡಬೇಡಿರಿ

ಇದನ್ನು ಇನ್ನೊಂದು ರೀತಿಯಲ್ಲಿ ಹೀಗೂ ಹೇಳಬಹುದು, "ನನ್ನಿಂದ ನಿಮಗೆ ಶಿಕ್ಷೆ ಉಂಟಾಗುತ್ತದೆಂದು ನೀವು ಭಯಪಡಬೇಕಾಗಿಲ್ಲ." ಯೋಸೇಫನ ಸಹೋದರರು ಭಯಭೀತರಾಗಿದ್ದರು, ಏಕೆಂದರೆ ಅವರು ಯೋಸೇಫನಿಗೆ ಬಹಳವಾಗಿ ಕೇಡು ಮಾಡಿದ್ದರು ಮತ್ತು ಈಗ ಅವನು ಉನ್ನತ ಅಧಿಕಾರಿಯಾಗಿರುವ ಕಾರಣ ಅವರನ್ನು ಶಿಕ್ಷಿಸುವ ಅಧಿಕಾರವು ಅವನಿಗಿತ್ತು. ಯೋಸೇಫನು ಅವರಿಗೆ ದವಸಧಾನ್ಯವನ್ನು ಮಾರಲು ನಿರಾಕರಿಸಬಹುದಿತ್ತು, ಅಥವಾ ಅವರನ್ನು ಸೆರೆಮನೆಗೆ ಹಾಕಬಹುದಿತ್ತು ಅಥವಾ ಅವರನ್ನು ಕೊಲ್ಲಬಹುದಿತ್ತು.

ಕೇಡಿಗೆ ಬದಲಾಗಿ ಒಳ್ಳೆಯದನ್ನು

ಯೋಸೇಫನ ಸಹೋದರರು ಯೋಸೇಫನನ್ನು ಗುಲಾಮನನ್ನಾಗಿ ಮಾರಿದಾಗ ಅವರು ಕೇಡನ್ನು ಮಾಡಿದರು ಮತ್ತು ಅವನನ್ನು ಐಗುಪ್ತಕ್ಕೆ ಕರೆದೊಯ್ಯಲಾಯಿತು. ಆದರೆ ಯೋಸೇಫನು ಕ್ಷಾಮದ ಸಮಯದಲ್ಲಿ ತನ್ನ ಕುಟುಂಬವನ್ನು ಒಳಗೊಂಡಂತೆ ಇತರ ಸಾವಿರಾರು ಜನರನ್ನು ಹಸಿವಿನಿಂದ ಕಾಪಾಡಲು ಸಾಧ್ಯವಾಗುವಂತೆ ದೇವರು ಇದನ್ನು ಅನುಮತಿಸಿದನು. ಇದು ಬಹಳ ಒಳ್ಳೆಯ ಕಾರ್ಯವಾಗಿತ್ತು.

ಅನುವಾದದ ಪದಗಳು