kn_obs-tn/content/08/07.md

1.8 KiB

ಕನಸುಗಳನ್ನು ವ್ಯಾಖ್ಯಾನಿಸು

"ವ್ಯಾಖ್ಯಾನಿಸು" ಎಂದರೆ ಯಾವುದಾದರೊಂದರ ಅರ್ಥವನ್ನು ಹೇಳುವುದಾಗಿದೆ. ಯೋಸೇಫನು ಜನರಿಗೆ ಅವರ ಕನಸುಗಳ ಅರ್ಥವನ್ನು ಹೇಳಲು ಶಕ್ತನಾಗಿದ್ದನು.

ಯೋಸೇಫನನ್ನು ಅವನ ಬಳಿಗೆ ಕರೆತಂದರು

ಇದನ್ನು ಇನ್ನೊಂದು ರೀತಿಯಲ್ಲಿ ಹೀಗೂ ಹೇಳಬಹುದು, "ಯೋಸೇಫನನ್ನು ತನ್ನ ಬಳಿಗೆ ಕರೆತರುವಂತೆ ತನ್ನ ಸೇವಕರಿಗೆ ಆಜ್ಞಾಪಿಸಿದನು."

ದೇವರು ಬರಮಾಡುವನು

ದೇವರು ಏಳು ವರ್ಷಗಳ ಕಾಲ ಫಸಲುಗಳು ಚೆನ್ನಾಗಿ ಬೆಳೆಯುವಂತೆ ಮಾಡುವನು, ಅನಂತರ ಜನರಿಗೆ ಮತ್ತು ಪ್ರಾಣಿಗಳಿಗೆ ತಿನ್ನಲು ಸಾಕಗುವಷ್ಟು ದವಸಧಾನ್ಯ ದೊರೆಯದಂತೆ ಫಸಲುಗಳು ತೀರಾ ಕಡಿಮೆ ದವಸಧಾನ್ಯವನ್ನು ಉತ್ಪಾದಿಸುವಂತೆ ಮಾಡುವನು.

ಕ್ಷಾಮ

ತೋಟಗಳು ಮತ್ತು ಹೊಲಗಳು ಕಡಿಮೆ ಆಹಾರವನ್ನು ಉತ್ಪಾದಿಸುವವು ಇದರಿಂದ ಜನರಿಗೂ ಮತ್ತು ಪ್ರಾಣಿಗಳಿಗೂ ತಿನ್ನಲು ಸಾಕಷ್ಟು ಆಹಾರ ಇರುವುದಿಲ್ಲ.

ಅನುವಾದದ ಪದಗಳು