kn_obs-tn/content/07/10.md

2.5 KiB

ಸಮಾಧಾನದಲ್ಲಿ ಜೀವಿಸಿದರು

ಇದು ಏಸಾವನು ಮತ್ತು ಯಾಕೋಬನು ಪರಸ್ಪರವಾಗಿ ಒಬ್ಬರ ಮೇಲೊಬ್ಬರು ಕೋಪಗೊಳ್ಳಲಿಲ್ಲ ಮತ್ತು ಪರಸ್ಪರ ಒಬ್ಬರೊಂದಿಗೊಬ್ಬರು ಕಾದಾಡಲಿಲ್ಲ ಎಂಬ ಅಂಶವನ್ನು ಸೂಚಿಸುತ್ತದೆ.

ಅವನನ್ನು ಹೂಣಿಟ್ಟರು

ಅವರು ನೆಲದಲ್ಲಿ ಗುಂಡಿಯನ್ನು ತೋಡಿ, ಇಸಾಕನ ಪಾರ್ಥಿವ ದೇಹವನ್ನು ಅದರಲ್ಲಿ ಇಟ್ಟರು ಮತ್ತು ಮಣ್ಣಿನಿಂದ ಅಥವಾ ಕಲ್ಲುಗಳಿಂದ ಗುಂಡಿಯನ್ನು ಮುಚ್ಚಿದರು ಎಂಬ ಅರ್ಥವನ್ನು ಕೊಡುತ್ತದೆ. ಅಥವಾ ಅವರು ಇಸಾಕನ ಪಾರ್ಥಿವ ದೇಹವನ್ನು ಗವಿಯಲ್ಲಿ ಇಟ್ಟರು ಮತ್ತು ಅದರ ಬಾಗಿಲನ್ನು ಮುಚ್ಚಿದರು ಎಂಬ ಅರ್ಥವನ್ನು ಕೊಡುತ್ತದೆ.

ಒಡಂಬಡಿಕೆಯ ವಾಗ್ದಾನಗಳು

ಇವು ಅಬ್ರಹಾಮನೊಂದಿಗಿನ ತನ್ನ ಒಡಂಬಡಿಕೆಯಲ್ಲಿ ದೇವರು ಮಾಡಿದ ವಾಗ್ದಾನಗಳಾಗಿವೆ.

ಇಸಾಕನಿಂದ ಯಾಕೋಬನಿಗೆ ವರ್ಗಾಯಿಸಲಾಯಿತು

ಆ ವಾಗ್ದಾನಗಳು ಅಬ್ರಹಾಮನಿಂದ ಅವನ ಮಗನಾದ ಇಸಾಕನಿಗೆ ಹೋಯಿತು, ಈಗ ಇಸಾಕನ ಮಗನಾದ ಯಾಕೋಬನಿಗೆ ಹೋಯಿತು. ಏಸಾವನು ವಾಗ್ದಾನಗಳನ್ನು ಹೊಂದಿಕೊಳ್ಳಲಿಲ್ಲ. ಇದನ್ನು ಸಹ ನೋಡಿರಿ 06:04.

ಇದೊಂದು ಸತ್ಯವೇದದ ಕಥೆ

ಸತ್ಯವೇದದ ಕೆಲವು ಭಾಷಾಂತರಗಳಲ್ಲಿ ಈ ಉಲ್ಲೇಖಗಳು ಸ್ವಲ್ಪ ವ್ಯತ್ಯಾಸವಾಗಿರುತ್ತವೆ.

ಅನುವಾದದ ಪದಗಳು