kn_obs-tn/content/07/06.md

2.0 KiB

ಏಸಾವನ ಯೋಚನೆ

ತನ್ನ ತಂದೆಯು ಮರಣಹೊಂದಿದ ನಂತರ ಯಾಕೋಬನನ್ನು ಕೊಲ್ಲುವುದು ಏಸಾವನ ಯೋಚನೆಯಾಗಿತ್ತು.

ಅವಳು ಮತ್ತು ಇಸಾಕನು ಯಾಕೋಬನನ್ನು ಕಳುಹಿಸಿದರು

ರೆಬೆಕ್ಕಳು ಯಾಕೋಬನನ್ನು ಏಸಾವನಿಂದ ರಕ್ಷಿಸಲು ಬಯಸಿದಳು, ಆದುದರಿಂದ ಅವಳು ಯಾಕೋಬನನ್ನು ಕಳುಹಿಸುವ ಬಗ್ಗೆ ಇಸಾಕನ ಬಳಿಯಲ್ಲಿ ಮಾತನಾಡಿದಳು.

ಆಕೆಯ ಸಂಬಂಧಿಕರೊಂದಿಗೆ ವಾಸಿಸಲು ದೂರ ಕಳುಹಿಸಿದಳು

ಅಬ್ರಹಾಮನ ಸೇವಕನು ಇಸಾಕನ ಹೆಂಡತಿಯಾಗಲು ರೆಬೆಕ್ಕಳನ್ನು ಕರೆತರಲು ಹೋದಾಗ ಅವಳು ವಾಸಿಸುತ್ತಿದ್ದ ಸ್ಥಳವು ಈ ‍ಸ್ಥಳವು ಒಂದೆಯಾಗಿದೆ. ಇದನ್ನು ಸ್ಪಷ್ಟಪಡಿಸಲು, "ಅವಳು ವಾಸಿಸುತ್ತಿದ್ದ ಅದೇ ದೇಶದಲ್ಲಿರುವ ಸಂಬಂಧಿಕರ ಬಳಿಗೆ" ಎಂದು ನೀವು ಸೇರಿಸಬಹುದು. ಆ ದೇಶವು ಪೂರ್ವದಿಕ್ಕಿನಲ್ಲಿತ್ತು, ನೂರಾರು ಮೈಲಿಗಳಷ್ಟು ದೂರದಲ್ಲಿತ್ತು.

ಆಕೆಯ ಸಂಬಂಧಿಕರು

ಇದನ್ನು "ಅವರ ಸಂಬಂಧಿಕರು" ಎಂದು ಅನುವಾದಿಸಬಹುದು. ಅಬ್ರಹಾಮನ ಸಹೋದರನು ರೆಬೆಕ್ಕಳ ಅಜ್ಜನಾದ ಕಾರಣ, ಅವಳ ಸಂಬಂಧಿಕರು ಇಸಾಕನ ಸಂಬಂಧಿಕರಾಗಿದ್ದರು.

ಅನುವಾದದ ಪದಗಳು