kn_obs-tn/content/07/03.md

2.2 KiB

ಅವನ ಆಶೀರ್ವಾದವನ್ನು ಕೊಟ್ಟನು

ತಮ್ಮ ಮಕ್ಕಳಿಗೆ ಒಳ್ಳೇ ಕಾರ್ಯಗಳು ಸಂಭವಿಸಲಿ ಎಂಬ ತಮ್ಮ ಬಯಕೆಯನ್ನು ಔಪಚಾರಿಕವಾಗಿ ವ್ಯಕ್ತಪಡಿಸುವುದು ತಂದೆಯಂದಿರ ರೂಢಿಯಾಗಿತ್ತು. ಸಾಮಾನ್ಯವಾಗಿ ಹಿರಿಯ ಮಗನಿಗೆ ಉತ್ತಮವಾದ ವಾಗ್ದಾನಗಳು ದೊರೆಯುತ್ತಿದ್ದವು. ಇಸಾಕನು ಈ ಮೇಲ್ತರವಾದ ಸಮೃದ್ಧಿಯು ಏಸಾವನಿಗೆ ಉಂಟಾಗಲಿ ಎಂದು ಬಯಸಿದ್ದನು.

ಅವನನ್ನು ಮೋಸಗೊಳಿಸಿದನು

"ಮೋಸ" ಎಂಬ ಪದವು ಯಾರೊಬ್ಬರನ್ನು ಉದ್ದೇಶಪೂರ್ವಕವಾಗಿ ಮೋಸಗೊಳಿಸಲು ಏನನ್ನಾದರೂ ಮಾಡುವುದು ಎಂಬ ಅರ್ಥವುಳ್ಳದಾಗಿದೆ. ಏಸಾವನಿಗೆ ಬದಲಾಗಿ ಯಾಕೋಬನಿಗೆ ವಿಶೇಷವಾದ ಆಶೀರ್ವಾದವನ್ನು ದೊರಕುವಂತೆ ಮಾಡಲು ರೆಬೆಕ್ಕಳು ಇಸಾಕನನ್ನು ಮೋಸಗೊಳಿಸಲು ಉಪಾಯವನ್ನು ಮಾಡಿದಳು.

ನಟಿಸಿದನು

"ನಟಿಸುವುದು" ಎಂಬ ಪದವು ಯಾಕೋಬನು ತನ್ನ ತಂದೆಯನ್ನು ಹೇಗೆ ಮೋಸಗೊಳಿಸುತ್ತಾನೆ ಎಂಬುದನ್ನು ತೋರಿಸುತ್ತದೆ (ಅವನ ವೃದ್ಧಾಪ್ಯದಲ್ಲಿ ತೀರಾ ಮೊಬ್ಬಾದ ದೃಷ್ಟಿಯುಳ್ಳವನಾಗಿದ್ದನು).

ಮೇಕೆಯ ಚರ್ಮಗಳು

ಮೇಕೆಯ ಚರ್ಮಗಳ ಕೂದಲು ಯಾಕೋಬನನ್ನು ಏಸಾವನಂತೆ ಭಾವಿಸುವಂತೆ ಮಾಡುತ್ತದೆ.

ಅನುವಾದದ ಪದಗಳು