kn_obs-tn/content/07/01.md

2.5 KiB

ಮನೆಯಲ್ಲಿರಲು ಬಯಸಿದನು … ಬೇಟೆಯಾಡಲು ಬಯಸಿದನು

ಕೆಲವು ಭಾಷೆಗಳಲ್ಲಿ "ಪ್ರೀತಿ" ಎಂಬ ಪದವನ್ನು ಬಳಸಲಾಗುತ್ತದೆ, ಆದರೆ ಇದರಲ್ಲಿ "ರೆಬೆಕ್ಕಳು ಯಾಕೋಬನನ್ನು ಪ್ರೀತಿಸಿದಳು" ಎಂದು ಬಳಸುವುದಕ್ಕಿಂತ ಇದು ಭಿನ್ನವಾಗಿರುತ್ತದೆ. ಉದಾಹರಣೆಗೆ, ಇದನ್ನು "ಮನೆಯಲ್ಲಿರಲು ಇಷ್ಟಪಟ್ಟನು ... ಬೇಟೆಯಾಡಲು ಇಷ್ಟಪಟ್ಟನು" ಅಥವಾ "ಮನೆಯಲ್ಲಿರಲು ಬಯಸಿದನು ... ಬೇಟೆಯಾಡಲು ಬಯಸಿದನು" ಎಂದು ಅನುವಾದಿಸಬಹುದು.

ಮನೆಯಲ್ಲಿ

ಈ ಪದಗುಚ್ಛವು ಕುಟುಂಬವು ವಾಸಿಸುವ ಸ್ಥಳದ ಸುತ್ತಮುತ್ತಲಿರುವ ಪ್ರದೇಶವನ್ನು ಸೂಚಿಸುತ್ತದೆ. ಯಾಕೋಬನು ಅವರು ವಾಸಿಸುತ್ತಿದ್ದ ಡೇರೆಗಳ ಹತ್ತಿರ ಅಸುಪಾಸಿನಲ್ಲಿರಲು ಬಯಸಿದನು. ಕೆಲವು ಭಾಷೆಗಳಲ್ಲಿ "ಮನೆಯಲ್ಲಿ" ಎಂಬುದಕ್ಕೆ ವಿಶೇಷವಾದ ಪದಗುಚ್ಛ ಇರುತ್ತದೆ.

ರೆಬೆಕ್ಕಳು ಯಾಕೋಬನನ್ನು ಪ್ರೀತಿಸಿದಳು, ಆದರೆ ಇಸಾಕನು ಏಸಾವನನ್ನು ಪ್ರೀತಿಸಿದನು

ಇದನ್ನು “ರೆಬೆಕ್ಕಳು ಯಾಕೋಬನ ಮೇಲೆ ಹೆಚ್ಚು ಮಮತೆಯುಳ್ಳವಳಾಗಿದ್ದಳು ಮತ್ತು ಇಸಾಕನು ಏಸಾವನ ಮೇಲೆ ಹೆಚ್ಚು ಮಮತೆಯುಳ್ಳವನಾಗಿದ್ದನು” ಎಂದು ಅನುವಾದಿಸಬಹುದು. ರೆಬೆಕ್ಕಳು ಮತ್ತು ಇಸಾಕನು ಇನ್ನೊಬ್ಬ ಮಗನನ್ನು ಪ್ರೀತಿಸಲಿಲ್ಲ ಎಂಬುದು ಇದರರ್ಥವಲ್ಲ, ಆದರೆ ತಂದೆತಾಯಿಗಳಿಬ್ಬರಿಗೂ ಅಚ್ಚುಮೆಚ್ಚಿನ ಮಕ್ಕಳಿದ್ದರು ಎಂಬುದು ಇದರ ಅರ್ಥವಾಗಿದೆ.

ಅನುವಾದದ ಪದಗಳು