kn_obs-tn/content/06/07.md

2.0 KiB

ರೆಬೆಕ್ಕಳ ಶಿಶುಗಳು ಜನಿಸಿದವು

ಕೆಲವು ಭಾಷೆಗಳಲ್ಲಿ ಇದನ್ನು "ರೆಬೆಕ್ಕಳು ನೋಡಿ ಅವುಗಳನ್ನು ತೆಗೆದುಕೊಂಡಾಗ" ಅಥವಾ "ರೆಬೆಕ್ಕಳು ಅವುಗಳನ್ನು ಬೆಳಕಿಗೆ ತಂದಾಗ" ಎಂದು ಪರೋಕ್ಷವಾದ ರೀತಿಯಲ್ಲಿ ಹೇಳುವುದುಂಟು.

ಹಿರಿಯ ಮಗನು … ಕಿರಿಯ ಮಗನು

"ಹೊರಬಂದ ಮೊದಲನೆಯ ಮಗನು ... ಹೊರಬಂದ ಎರಡನೆಯ ಮಗನು" ಎಂದು ಇದನ್ನು ಅನುವಾದಿಸಬಹುದು. "ಹಿರಿಯವನು" ಮತ್ತು "ಕಿರಿಯವನು" ಎಂದು ಅನುವಾದಿಸುವಾಗ ಆ ಹುಡುಗರು ಅವಳಿ ಮಕ್ಕಳಾಗಿದ್ದರು ಎಂದು ತಿಳಿಸುವಂತೆ ಅನುವಾದಿಸಿರಿ.

ಕೆಂಪು

ಅವನ ಚರ್ಮವು ತುಂಬಾ ಕೆಂಪಾಗಿತ್ತು ಅಥವಾ ಅವನ ದೇಹದಲ್ಲಿನ ಕೂದಲು ಕೆಂಪು ಬಣ್ಣದ್ದಾಗಿತ್ತು ಎಂಬುದು ಇದರರ್ಥವಾಗಿದೆ.

ಕೂದಲುಳ್ಳ

ಏಸಾವನ ದೇಹದಲ್ಲಿ ಬಹಳಷ್ಟು ಕೂದಲಿತ್ತು. "ಹಿರಿಯ ಮಗನ ದೇಹವು ಕೆಂಪಾಗಿತ್ತು, ಬಹಳಷ್ಟು ಕೂದಲಿತ್ತು" ಎಂದು ನೀವು ಹೇಳಬಹುದು.

ಇದೊಂದು ಸತ್ಯವೇದದ ಕಥೆ

ಸತ್ಯವೇದದ ಕೆಲವು ಭಾಷಾಂತರಗಳಲ್ಲಿ ಈ ಉಲ್ಲೇಖಗಳು ಸ್ವಲ್ಪ ವ್ಯತ್ಯಾಸವಾಗಿರುತ್ತವೆ.

ಅನುವಾದದ ಪದಗಳು