kn_obs-tn/content/06/01.md

1.6 KiB

ತನ್ನ ಸೇವಕರಲ್ಲಿ ಒಬ್ಬನನ್ನು ಹಿಂದಿರುಗಿ ಕಳುಹಿಸಿದನು

"ತನ್ನ ಸೇವಕರಲ್ಲಿ ಒಬ್ಬನಿಗೆ ಹಿಂದಿರುಗಿ ಹೋಗಲು ಹೇಳಿದನು" ಎಂದು ಇದನ್ನು ಅನುವಾದಿಸಬಹುದು. " ಹಿಂದಿರುಗಿ " ಎಂಬ ಪದವು, ಅಬ್ರಹಾಮನು ಕಾನಾನಿಗೆ ಬರುವುದಕ್ಕಿಂತ ಮುಂಚೆ ಅಂದರೆ ತುಂಬಾ ವರ್ಷಗಳ ಹಿಂದೆ ವಾಸಿಸುತ್ತಿದ್ದ ಅದೇ ಸ್ಥಳಕ್ಕೆ ಹೋಗುವನು ಎಂಬ ಅರ್ಥವುಳ್ಳದ್ದಾಗಿದೆ. ಈ ಪದ ಅನುವಾದಿಸುವಾಗ ಅದನ್ನು ಸ್ಪಷ್ಟಪಡಿಸಿರಿ.

ಆ ದೇಶಕ್ಕೆ

ಈ ದೇಶವು ಅಬ್ರಹಾಮನು ಈಗ ವಾಸಿಸುತ್ತಿದ್ದ ಸ್ಥಳದ ಪೂರ್ವದಿಕ್ಕಿನಲ್ಲಿತ್ತು.

ತನ್ನ ಮಗನಾದ ಇಸಾಕನಿಗೆ ಪತ್ನಿಯನ್ನು ಕರೆತರಲು

ಇದನ್ನು "ತನ್ನ ಮಗನಾದ ಇಸಾಕನು ಮದುವೆಯಾಗುವುದಕ್ಕಾಗಿ ಅವಿವಾಹಿತ ಸ್ತ್ರೀಯನ್ನು ಕರೆತರಲು" ಎಂದು ಅನುವಾದಿಸಬಹುದು.

ಅನುವಾದದ ಪದಗಳು