kn_obs-tn/content/05/08.md

2.3 KiB

ಅವನ ಮಗನನ್ನು ಕೊಲ್ಲು

ದೇವರು ಮನುಷ್ಯನನ್ನು ಯಜ್ಞವಾಗಿ ಅರ್ಪಿಸಬೇಕೆಂದು ಬಯಸಲಿಲ್ಲ. ಅಬ್ರಹಾಮನು ತನ್ನ ಮಗನನ್ನು ಪ್ರೀತಿಸುತ್ತಿರುವುದಕ್ಕಿಂತ ಹೆಚ್ಚಾಗಿ ದೇವರನ್ನು ಪ್ರೀತಿಸುತ್ತಿರುವನೋ ಮತ್ತು ಅವನ ಮಗನನ್ನು ದೇವರಿಗೆ ಹಿಂತಿರುಗಿ ಕೊಡಬೇಕೆಂದು ದೇವರು ಹೇಳಿದಾಗಲೂ ಅವನು ದೇವರಿಗೆ ವಿಧೇಯನಾಗುವನೋ ಎಂದು ತಿಳಿದುಕೊಳ್ಳಲು ದೇವರು ಬಯಸಿದನು.

ನಿಲ್ಲು! ಹುಡುಗನನ್ನು ಗಾಯಗೊಳಿಸಬೇಡ!

ದೇವರು ಇಸಾಕನನ್ನು ಕಾಪಾಡಿದನು ಮತ್ತು ಅವನನ್ನು ಕೊಲ್ಲದಂತೆ ಅಬ್ರಹಾಮನನ್ನು ತಡೆದನು.

ನೀನು ನನಗೆ ಭಯಪಡುತ್ತಿ

ಅಬ್ರಹಾಮನು ದೇವರಿಗೆ ಭಯಪಟ್ಟನು, ಇದು ದೇವರ ಕುರಿತಾಗಿರುವಂಥ ಗೌರವವನ್ನು ಮತ್ತು ಭಯಭಕ್ತಿಯನ್ನು ಒಳಗೊಂಡಿದೆ. ಆ ವಿಷಯಗಳ ಕಾರಣದಿಂದ ಅವನು ದೇವರಿಗೆ ವಿಧೇಯನಾದನು.

ನಿನ್ನ ಒಬ್ಬನೇ ಮಗನನ್ನು

ಇಷ್ಮಾಯೇಲನು ಸಹ ಅಬ್ರಹಾಮನ ಮಗನಾಗಿದ್ದನು, ಆದರೆ ಇಸಾಕನು ಮಾತ್ರವೇ ಅಬ್ರಹಾಮನ ಮತ್ತು ಸಾರಳ ಒಬ್ಬನೇ ಮಗನಾಗಿದ್ದನು. ದೇವರ ಒಡಂಬಡಿಕೆಯು ಇಸಾಕನೊಂದಿಗೆ ಇತ್ತು ಮತ್ತು ಇಸಾಕನ ಮೂಲಕ ದೇವರು ತನ್ನ ವಾಗ್ದಾನವನ್ನು ನೆರವೇರಿಸುವನು.

ಅನುವಾದದ ಪದಗಳು