kn_obs-tn/content/05/07.md

1.9 KiB

ಯಜ್ಞದ ಸ್ಥಳಕ್ಕೆ ನಡೆದುಕೊಂಡು ಹೋದರು

ಇಸಾಕನನ್ನು ವಿಶೇಷವಾದ ಎತ್ತರವಾದ ಬೆಟ್ಟದ ಮೇಲೆ ಯಜ್ಞಮಾಡಬೇಕೆಂದು ದೇವರು ಅಬ್ರಹಾಮನಿಗೆ ಹೇಳಿದನು, ಅದು ಅವರು ವಾಸಿಸುತ್ತಿದ್ದ ಸ್ಥಳದಿಂದ ಮೂರು ದಿನಗಳ ಕಾಲದ ನಡಿಗೆಯಷ್ಟು ದೂರವಾಗಿತ್ತು.

ಯಜ್ಞಕ್ಕೆ ಬೇಕಾದ ಕಟ್ಟಿಗೆ

ಯಜ್ಞಮಾಡುವುದಕ್ಕಾಗಿ, ಸಾಮಾನ್ಯವಾಗಿ ಕುರಿಮರಿಯನ್ನು ವಧಿಸಲಾಗುತ್ತಿತ್ತು ಅನಂತರ ಕಟ್ಟಿಗೆಯ ಮೇಲೆ ಅದನ್ನು ಇಡಲಾಗುತ್ತಿತ್ತು, ಆಗ ಬೆಂಕಿಯು ಕಟ್ಟಿಗೆಯನ್ನು ಮತ್ತು ಕುರಿಮರಿಯನ್ನು ದಹಿಸಿಬಿಡುತ್ತಿತ್ತು.

ಕುರಿಮರಿ

ಸಾಮಾನ್ಯವಾಗಿ ಚಿಕ್ಕ ಕುರಿ ಅಥವಾ ಹೋತವು ಯಜ್ಞಕ್ಕಾಗಿ ಸಮರ್ಪಿಸುವಂಥ ಪ್ರಾಣಿಯಾಗಿತ್ತು.

ಒದಗಿಸು

ಇಸಾಕನೇ ದೇವರು ಒದಗಿಸಿದ "ಕುರಿಮರಿ" ಎಂದು ಅಬ್ರಹಾಮನು ನಂಬಿದ್ದನು, ಆದರೆ ಇಸಾಕನಿಗೆ ಬದಲಾಗಿ ಯಜ್ಞಮಾಡುವಂತೆ ಟಗರನ್ನು ಒದಗಿಸಿಕೊಡುವ ಮೂಲಕ ದೇವರು ಅಬ್ರಹಾಮನ ಮಾತುಗಳನ್ನು ನೆರವೇರಿಸಿದನು.

ಅನುವಾದದ ಪದಗಳು