kn_obs-tn/content/05/06.md

1.9 KiB

ದೇವರು ಅಬ್ರಹಾಮನ ನಂಬಿಕೆಯನ್ನು ಪರೀಕ್ಷಿಸಿದನು

ಅಬ್ರಹಾಮನು ತಾನು ದೇವರಿಗೆ ಸಂಪೂರ್ಣವಾಗಿ ಅಧೀನನಾಗಿದ್ದನೆಂದು ತೋರಿಸಬೇಕೆಂದು, ದೇವರು ಬಯಸಿದನು, ಅಂದರೆ ದೇವರು ಅವನಿಗೆ ಏನು ಮಾಡಲು ಹೇಳಿದರೂ ಅವನು ವಿಧೇಯನಾಗಬೇಕು ಎಂದು ದೇವರು ಬಯಸಿದನು.

ಅವನನ್ನು ಕೊಲ್ಲು

ದೇವರು ಮನುಷ್ಯನನ್ನು ಯಜ್ಞವಾಗಿ ಅರ್ಪಿಸಬೇಕೆಂದು ಬಯಸಲಿಲ್ಲ. ಅಬ್ರಹಾಮನು ತನ್ನ ಮಗನನ್ನು ಪ್ರೀತಿಸುತ್ತಿರುವುದಕ್ಕಿಂತ ಹೆಚ್ಚಾಗಿ ದೇವರನ್ನು ಪ್ರೀತಿಸುತ್ತಿರುವನೋ ಮತ್ತು ಅವನ ಮಗನನ್ನು ದೇವರಿಗೆ ಹಿಂತಿರುಗಿ ಕೊಡಬೇಕೆಂದು ದೇವರು ಹೇಳಿದಾಗಲೂ ಅವನು ದೇವರಿಗೆ ವಿಧೇಯನಾಗುವನೋ ಎಂದು ತಿಳಿದುಕೊಳ್ಳಲು ದೇವರು ಬಯಸಿದನು.

ಯಜ್ಞ ಮಾಡಲು ಸಿದ್ಧನಾದನು

ಅಬ್ರಹಾಮನು ತನ್ನ ಮಗನನ್ನು ಯಜ್ಞ ಮಾಡಲು ಸಿದ್ಧನಾದನು. ಅವನ ಮಗನನ್ನು ಕೊಲ್ಲುವುದಕ್ಕಿಂತ ಮುಂಚೆ ದೇವರು ಅವನನ್ನು ತಡೆದನು.

ಅನುವಾದದ ಪದಗಳು