kn_obs-tn/content/05/04.md

2.2 KiB

ಸಾಮಾನ್ಯ ಮಾಹಿತಿ

ದೇವರು ಅಬ್ರಾಮನೊಂದಿಗೆ ಮಾತನಾಡುವುದನ್ನು ಮುಂದುವರಿಸಿದನು

ವಾಗ್ದಾನದ ಮಗನು

ಇಸಾಕನು ಸಾರಯಳಿಗೂ ಮತ್ತು ಅಬ್ರಾಮನಿಗೂ ದೇವರು ವಾಗ್ದಾನ ಮಾಡಿದಂಥ ಮಗನಾಗಿರುವನು. ಈತನು ಅಬ್ರಾಮನಿಗೆ ಅನೇಕ ಸಂತತಿಯನ್ನು ದಯಪಾಲಿಸಲು ದೇವರು ಉಪಯೋಗಿಸುವ ಮಗನೂ ಕೂಡಾ ಆಗಿರುವನು.

ನಾನು ಅವನೊಂದಿಗೆ ನನ್ನ ಒಡಂಬಡಿಕೆಯನ್ನು ಮಾಡಿಕೊಳ್ಳುವೆನು

ಇದು ದೇವರು ಅಬ್ರಹಾಮನೊಂದಿಗೆ ಮಾಡಿಕೊಂಡಂಥ ಅದೇ ಒಡಂಬಡಿಕೆಯಾಗಿರುತ್ತದೆ.

ಅನೇಕರ ಮೂಲಪಿತೃ

ದೇವರು ವಾಗ್ದಾನ ಮಾಡಿದಂತೆ ಅಬ್ರಹಾಮನು ಅನೇಕ ಜನರ ಪೂರ್ವಿಕನಾಗುವನು ಮತ್ತು ಅವರು ಅನೇಕ ಜನಾಂಗಗಳಾಗುವರು.

ರಾಜಕುಮಾರಿ

ರಾಜಕುಮಾರಿ ಅಂದರೆ ರಾಜನ ಮಗಳು. ಸಾರಯಳು ಮತ್ತು ಸಾರಾ ಎಂಬ ಎರಡೂ ಹೆಸರುಗಳು "ರಾಜಕುಮಾರಿ" ಎಂಬ ಅರ್ಥವನ್ನು ನೀಡುತ್ತವೆ. ಆದರೆ ಆಕೆಯು ಅನೇಕ ಜನಾಂಗಗಳಿಗೆ ತಾಯಿಯಾಗುವಳು ಮತ್ತು ಆಕೆಯ ಸಂತತಿಯವರಲ್ಲಿ ಅನೇಕರು ರಾಜರಾಗುವರು ಎಂದು ಸೂಚಿಸುವುದಕ್ಕಾಗಿ ದೇವರು ಆಕೆಯ ಹೆಸರನ್ನು ಬದಲಾಯಿಸಿದನು.

ಅನುವಾದದ ಪದಗಳು