kn_obs-tn/content/04/04.md

3.0 KiB

ನೂರಾರು ವರ್ಷಗಳ ನಂತರ

"ಬಾಬೆಲಿನಲ್ಲಿ ಜನರು ವಿಭಿನ್ನ ಭಾಷಾ ಗುಂಪುಗಳಾಗಿ ವಿಭಜನೆಯಾಗಿ ಅನೇಕ ತಲೆಮಾರುಗಳಾದ ನಂತರ" ಅಥವಾ, "ಅದು ಸಂಭವಿಸಿ ಧೀರ್ಘ ಸಮಯವಾದ ನಂತರ" ಎಂದು ಇದನ್ನು ಅನುವಾದಿಸಬಹುದು.

ನಿನ್ನ ದೇಶವನ್ನು ಬಿಟ್ಟು ಹೊರಡು

ಇದು ಅಬ್ರಾಮನು ಹುಟ್ಟಿ ಬೆಳೆದ ಪ್ರದೇಶವನ್ನು ಸೂಚಿಸುತ್ತದೆ ("ಊರ್" ಎಂದು ಕರೆಯಲ್ಪಡುವಂಥ ಮಧ್ಯ ಏಷಿಯಾದ ಪ್ರದೇಶ). ಇದನ್ನು "ಸ್ಥದೇಶ" ಅಥವಾ "ತಾಯ್ನಾಡು" ಅಥವಾ ಇದಕ್ಕೆ ಸಮಾನವಾಗಿರುವ ರೀತಿಯಲ್ಲಿ ಅನುವಾದಿಸಬಹುದು.

ಮತ್ತು ಕುಟುಂಬ

ಅವನ ಸಂಬಂಧಿಕರಲ್ಲಿ ಹೆಚ್ಚಿನವರನ್ನು ಬಿಟ್ಟುಹೋಗುವಂತೆ ದೇವರು ಅಬ್ರಾಮನನ್ನು ಕರೆದನು. ಆದರೂ, ದೇವರು ಅವನು ಜವಾಬ್ದಾರಿಯಲ್ಲಿರುವ ಅಂದರೆ ಹೆಂಡತಿ ಸೇರಿದಂತೆ ಇತರ ಜನರನ್ನು ತ್ಯಜಿಸಿಬಿಡಲು ಅಬ್ರಾಮನಿಗೆ ಹೇಳಲಿಲ್ಲ.

ನಿನ್ನನ್ನು ದೊಡ್ಡ ಜನಾಂಗವನ್ನಾಗಿ ಮಾಡುವೆನು

ದೇವರು ಅಬ್ರಾಮನಿಗೆ ಅನೇಕ ಸಂತತಿಗಳು ಉಂಟಾಗುವಂತೆ ಮಾಡುವನು, ಮತ್ತು ಅವರು ದೊಡ್ಡ ಹಾಗೂ ಪ್ರಮುಖ ಜನಾಂಗವಾಗಿ ಅಥವಾ ದೇಶವಾಗಿ ಮಾರ್ಪಾಡುವರು.

ನಿನ್ನ ಹೆಸರನ್ನು ಪ್ರಖ್ಯಾತಿಗೆ ತರುವೆನು

ಅಬ್ರಾಮನ ಹೆಸರು ಮತ್ತು ಕುಟುಂಬವು ಲೋಕದಾದ್ಯಂತ ಪ್ರಸಿದ್ಧವಾಗುವುದು ಮತ್ತು ಜನರು ಅವರ ಬಗ್ಗೆ ಒಳ್ಳೆಯದಾಗಿ ಯೋಚಿಸುವರು ಎಂಬುದು ಇದರ ಅರ್ಥವಾಗಿದೆ.

ಭೂಮಿಯ ಮೇಲಿರುವ ಎಲ್ಲಾ ಕುಟುಂಬಗಳು

ದೇವರನ್ನು ಅನುಸರಿಸಲು ಅಬ್ರಾಮ ಮಾಡಿದ ನಿರ್ಧಾರವು ಅವನ ಸ್ವಂತ ಕುಟುಂಬವನ್ನು ಮಾತ್ರವಲ್ಲದೇ ಭೂಮಿಯ ಮೇಲಿರುವ ಪ್ರತಿಯೊಂದು ಜನಾಂಗದ ಕುಟುಂಬಗಳ ಮೇಲೆಯೂ ಪರಿಣಾಮ ಬೀರುತ್ತದೆ.

ಅನುವಾದದ ಪದಗಳು