kn_obs-tn/content/04/03.md

2.2 KiB
Raw Permalink Blame History

ಅವರ ಭಾಷೆಯನ್ನು ಬದಲಾಯಿಸಿದನು

ಆ ಕ್ಷಣವೇ, ದೇವರು ಅವರಿಗೆ ಮಾತನಾಡಲು ವಿಭಿನ್ನ ಭಾಷೆಗಳನ್ನು ಅದ್ಭುತಕರವಾಗಿ ನೀಡಿದನು, ಆದುದರಿಂದ ಅವರು ಪರಸ್ಪರ ಒಬ್ಬರನ್ನೊಬ್ಬರು ಅರ್ಥಮಾಡಿಕೊಳ್ಳಲು ಸಾಧ್ಯವಾಗಲಿಲ್ಲ.

ಅನೇಕ ವಿಧವಾದ ಭಾಷೆಗಳು

ಒಂದೇ ಭಾಷೆಯನ್ನು ಮಾತನಾಡುವಂಥ ಒಂದು ದೊಡ್ಡ ಗುಂಪಿನ ಜನರಿಗೆ ಬದಲಾಗಿ, ಈಗ ಅಲ್ಲಿ ಹಲವಾರು ಸಣ್ಣ ಗುಂಪುಗಳು ಇದ್ದವು, ಪ್ರತಿಯೊಂದೂ ಗುಂಪು ತನ್ನದೇ ಆದ ಪ್ರತ್ಯೇಕ ಭಾಷೆಯನ್ನು ಮಾತನಾಡುತ್ತಿದ್ದವು.

ಜನರು ಚದುರಿದರು

ದೇವರು ಅವರ ಭಾಷೆಗಳನ್ನು ಬದಲಾಯಿಸಿದಾಗ, ಈ ಜನರ ಗುಂಪುಗಳು ಭೂಮಿಯ ಮೇಲೆ ಚದುರಿಹೋಗುವಂತೆ ಆತನು ಮಾಡಿದನು ಮತ್ತು ಪ್ರತಿಯೊಂದು ಗುಂಪೂ ತನ್ನ ಸ್ವಂತ ಪ್ರದೇಶಕ್ಕೆ ತೆರಳಿತು.

ಬಾಬೆಲ್

ಈ ಪಟ್ಟಣದ ನಿಖರವಾದ ಸ್ಥಳವು ನಮಗೆ ಗೊತ್ತಿಲ್ಲ, ಇದು ಪ್ರಾಚೀನ ಮಧ್ಯ ಪ್ರಾಚ್ಯದಲ್ಲಿ ಇತ್ತು ಎಂಬುದು ಮಾತ್ರವೇ ನಮಗೆ ತಿಳಿದಿದೆ.

ಗಲಿಬಿಲಿಗೊಂಡರು

ದೇವರು ಅವರ ಭಾಷೆಯನ್ನು ಬದಲಾಯಿಸಿದ ನಂತರ ಅವರು ಪರಸ್ಪರ ಒಬ್ಬರನ್ನೊಬ್ಬರು ಅರ್ಥಮಾಡಿಕೊಳ್ಳಲು ಸಾಧ್ಯವಾಗದೇ ಇರುವಾಗ ಜನರು ಹೇಗೆ "ಗಲಿಬಿಲಿಗೊಂಡರು" ಅಥವಾ "ದಿಗ್ಭ್ರಾಂತರಾದರು" ಎಂಬುದನ್ನು ಇದು ಸೂಚಿಸುತ್ತದೆ.

ಅನುವಾದದ ಪದಗಳು