kn_obs-tn/content/03/02.md

1.8 KiB

ದಯೆ ದೊರಕಿತು

ನೋಹನು ದೇವರಿಗೆ ಭಯಪಟ್ಟು ವಿಧೇಯನಾಗಿದ್ದುದರಿಂದ ದೇವರು ಅವನನ್ನು ಮೆಚ್ಚಿದನು. ನೋಹನು ಪಾಪರಹಿತನಲ್ಲದಿದ್ದರೂ, ದೇವರು ಅವನಿಗೆ ದಯೆ ತೋರಿಸಿದನು ಮತ್ತು ಅವನ ಕುಟುಂಬವನ್ನು ವಿನಾಶಕಾರಿಯಾದ ಪ್ರಳಯದಿಂದ ರಕ್ಷಿಸಲು ಸಂಕಲ್ಪವನ್ನು ಮಾಡಿದನು. ನೋಹನು ಅದೃಷ್ಟವಂತನಾಗಿದ್ದನು ಅಥವಾ ಅವನು ಅದರಿಂದ ಹೇಗೋ ತಪ್ಪಿಸಿಕೊಂಡನು ಎಂಬ ಅರ್ಥವನ್ನು ಉಂಟುಮಾಡದಂತೆ ಎಚ್ಚರಿಕೆ ವಹಿಸಿರಿ. ಆದರೆ ಬದಲಿಗೆ, ಅದು ದೇವರ ಆಯ್ಕೆಯಾಗಿತ್ತು ಎಂಬುದನ್ನುತಿಳಿಸಿ.

ಜಲಪ್ರಳಯ

03:01 ರಲ್ಲಿ ನೀವು ಇದನ್ನು ಹೇಗೆ ಅನುವಾದಿಸಿದ್ದೀರಿ ಎಂಬುದನ್ನು ನೋಡಿರಿ.

ಕಳುಹಿಸಲು

ಅತಿ ಹೆಚ್ಚು ಮಳೆಯನ್ನು ಬರಮಾಡುವ ಮೂಲಕ ಆಳವಾಗಿರುವ ನೀರು ಭೂಮಿಯನ್ನು ಆವರಿಸುವಂತೆ ಮಾಡಲು ದೇವರು ಯೋಜಿಸಿದನು. ಅಂದರೆ, ಆತನು ಅತಿ ಹೆಚ್ಚು ಮಳೆಯನ್ನು ಸುರಿಸುವ ಮೂಲಕ ಪ್ರವಾಹವನ್ನು ಉಂಟುಮಾಡಲು ಯೋಜಿಸಿದನು.

ಅನುವಾದದ ಪದಗಳು