kn_obs-tn/content/02/08.md

3.3 KiB

ನೀವು ಬೆತ್ತಲೆಯಾಗಿದ್ದೀರೆಂದು ನಿನಗೆ ಹೇಳಿದವರಾರು?

ಅಥವಾ, "ನೀವು ಬೆತ್ತಲೆಯಾಗಿದ್ದೀರೆಂದು ನಿಮಗೆ ಹೇಗೆ ತಿಳಿಯಿತು?" ದೇವರಿಗೆ ಈಗಾಗಲೇ ತನ್ನ ಎಲ್ಲಾ ಪ್ರಶ್ನೆಗಳಿಗೆ ಉತ್ತರವು ತಿಳಿದಿತ್ತು. ಈ ಪ್ರಶ್ನೆಯನ್ನು ಮತ್ತು ಮುಂದಿನ ಪ್ರಶ್ನೆಯನ್ನು ಕೇಳುವುದರ ಮೂಲಕ, ಆತನು ಆದಮನಿಗೆ ಅವಿಧೇಯತೆಯ ಪಾಪವನ್ನು ಒಪ್ಪಿಕೊಳ್ಳುವ ಅವಕಾಶವನ್ನು ಕೊಟ್ಟನು. ಬೆತ್ತಲೆಯಾಗಿರುವುದು ಪಾಪವಲ್ಲ. ದೇವರು ಆ ರೀತಿಯಲ್ಲಿ ಅವರನ್ನು ಸೃಷ್ಟಿಸಿದ್ದನು. ಅವರ ಬೆತ್ತಲೆತನದ ಕುರಿತು ಅವರಿಗಾದ ಅರಿವು ಸಮಸ್ಯೆಯಾಗಿತ್ತು. ಅವರ ನಾಚಿಕೆಯು ಅವರು ಪಾಪ ಮಾಡಿದ್ದಾರೆಂದು ತೋರಿಸಿತ್ತು.

ಆಕೆಯು ಹಣ್ಣನ್ನು ನನಗೆ ಕೊಟ್ಟಳು

ಪುರುಷನು ತನ್ನ ಅವೀಧೆಯತೆಯನ್ನು ಒಪ್ಪಿಕೊಳ್ಳುವುದನ್ನು ಮತ್ತು ದೇವರಿಗೆ ಅವಿಧೇಯನಾಗಿರುವ ಜವಾಬ್ದಾರಿಯನ್ನು ಹೊತ್ತುಕೊಳ್ಳುವುದನ್ನು ಬಿಟ್ಟು ಅವನು ಆ ಸ್ತ್ರೀಯನ್ನು ದೂಷಿಸಿದನು.

ಇದೇನು ನೀನು ಮಾಡಿದ್ದು?

ಅಥವಾ, "ನೀನು ಇದನ್ನು ಮಾಡಿದ್ದೇಕೆ?" ದೇವರಿಗೆ ಈಗಾಗಲೇ ಈ ಪ್ರಶ್ನೆಗೆ ಉತ್ತರವು ತಿಳಿದಿತ್ತು. ಈ ಪ್ರಶ್ನೆಯನ್ನು ಕೇಳುವುದರ ಮೂಲಕ, ಸ್ತ್ರೀಗೆ ಆಕೆಯ ತಪ್ಪನ್ನು ಒಪ್ಪಿಕೊಳ್ಳುವ ಅವಕಾಶವನ್ನು ಆತನು ನೀಡಿದನು. ಆಕೆಯು ಅದನ್ನು ಮಾಡಿರಬಾರದಿತ್ತು ಎಂದು ಸಹ ಆತನು ವ್ಯಕ್ತಪಡಿಸಿದನು.

ಸರ್ಪವು ನನ್ನನ್ನು ವಂಚಿಸಿತು

ಸರ್ಪವು ಅವಳನ್ನು ಮೋಸಗೊಳಿಸಿತು ಅಥವಾ ತಪ್ಪುದಾರಿಗೆ ಎಳೆಯಿತು. ಅವನು ಆಕೆಗೆ ಸುಳ್ಳು ಹೇಳಿದನು. ಅವನು ಆಕೆಯ ಮೇಲೆ ಮೋಡಿ ಮಾಡಿದನು ಅಥವಾ ಆಕೆಯನ್ನು ಮರುಳುಗೊಳಿಸಿದನು ಎಂದು ಸೂಚಿಸುವ ಪದವನ್ನು ಬಳಸಬೇಡಿರಿ. ಆಕೆಯು ತನ್ನ ಅವೀಧೆಯತೆಯನ್ನು ಒಪ್ಪಿಕೊಳ್ಳುವುದನ್ನು ಮತ್ತು ದೇವರಿಗೆ ಅವಿಧೇಯಳಾಗಿರುವ ಜವಾಬ್ದಾರಿಯನ್ನು ಹೊತ್ತುಕೊಳ್ಳುವುದನ್ನು ಬಿಟ್ಟು ಆಕೆಯು ಆ ಸರ್ಪವನ್ನು ದೂಷಿಸಿದಳು.

ಅನುವಾದದ ಪದಗಳು