kn_obs-tn/content/02/06.md

1.6 KiB

ಅವರ ಕಣ್ಣುಗಳು ತೆರೆದವು

ಇದನ್ನು "ಅವರು ಆ ಕಾರ್ಯಗಳನ್ನು ವಿಭಿನ್ನವಾಗಿ ಕಂಡರು" ಎಂದು ಅನುವಾದಿಸಬಹುದು. ಅವರು ಈಗ ಮೊದಲ ಬಾರಿಗೆ ಯಾವುದನ್ನು ಅರ್ಥಮಾಡಿಕೊಂಡಿದ್ದಾರೆ ಎಂಬುದು ಈ ಪದದ ಅರ್ಥವಾಗಿದೆ. ನಿಮ್ಮ ಭಾಷೆಯಲ್ಲಿ, ಇದಕ್ಕೆ ಸಮಾನವಾದ ಅರ್ಥವನ್ನು ವ್ಯಕ್ತಪಡಿಸುವುದಕ್ಕಿರುವಂಥ ಪದ ಇರಬಹುದು ನೀವು ಅನುವಾದ ಮಾಡಲು ಅದನ್ನು ಬಳಸಬಹುದು.

ತಾವು ಬೆತ್ತಲೆಯಾಗಿದ್ದೇವೆಂದು ತಿಳಿದುಕೊಂಡರು

ಪುರುಷನು ಮತ್ತು ಸ್ತ್ರೀಯು ದೇವರಿಗೆ ಅವಿಧೇಯರಾದ ನಂತರ, ಅವರು ತಾವು ಬೆತ್ತಲೆಯಾಗಿದ್ದೇವೆಂದು ನಾಚಿಕೆಪಟ್ಟರು. ಅದಕ್ಕಾಗಿಯೇ ಅವರು ತಮ್ಮ ನಗ್ನ ದೇಹಗಳನ್ನು ಮುಚ್ಚಿಕೊಳ್ಳಲು ಎಲೆಗಳನ್ನು ಬಳಸಿದರು.

ತಮ್ಮ ದೇಹಗಳನ್ನು ಮುಚ್ಚಿಕೊಂಡರು

ಪುರುಷನು ಮತ್ತು ಸ್ತ್ರೀಯು ದೇವರಿಂದ ತಮ್ಮನ್ನು ತಾವು ಮರೆಮಾಡಿಕೊಳ್ಳಲು ಎಲೆಗಳನ್ನು ಬಳಸಿಕೊಳ್ಳುವುದಕ್ಕೆ ಪ್ರಯತ್ನಿಸಿದರು.