kn_obs-tn/content/02/03.md

1.8 KiB

ಹಣ್ಣು

ಇದು ಯಾವ ರೀತಿಯ ಹಣ್ಣು ಎಂಬುದು ನಮಗೆ ಗೊತ್ತಿಲ್ಲ. ಈ ಮರದ ಮೇಲೆ ಅದು ಬೆಳೆದಿತ್ತು ಎಂಬುದು ಮಾತ್ರವೇ ನಮಗೆ ತಿಳಿದಿದೆ. ಸಾಧ್ಯವಾದರೆ ಇಲ್ಲಿ ಹಣ್ಣಿಗೆ ಬಳಸುವಂಥ ಸಾಮಾನ್ಯ ಪದವನ್ನು ಬಳಸುವುದು, ಮತ್ತು ನಿರ್ದಿಷ್ಟವಾದ ರೀತಿಯ ಹಣ್ಣಿನ ಪದವನ್ನು ಬಳಸದಿರುವುದು ಉತ್ತಮವಾಗಿರುತ್ತದೆ.

ಒಳ್ಳೇದರ ಕೆಟ್ಟದ್ದರ ಅರಿವನ್ನು ಹುಟ್ಟಿಸುವ ಮರ

ಕೆಟ್ಟದನ್ನು ಮತ್ತು ಒಳ್ಳೆಯದನ್ನು ಅರ್ಥಮಾಡಿಕೊಳ್ಳುವಂತೆ ಅವರನ್ನು ಸಮರ್ಥರನ್ನಾಗಿಸುವಂಥ ಈ ಮರದ ಹಣ್ಣನ್ನು ತಿನ್ನಲು ತಮಗೆ ಅನುಮತಿಯಿಲ್ಲವೆಂದು ಸ್ತ್ರೀಯು ಸರಿಯಾಗಿ ಅರ್ಥಮಾಡಿಕೊಂಡಿದ್ದಳು.

ನೀವು ಸಾಯುವಿರಿ

ವ್ಯಕ್ತಿಯ ಶಾರೀರಿಕ ಜೀವನವು ಅಂತ್ಯಗೊಳ್ಳುವಂಥ ಮರಣಕ್ಕೆ ಸಾಮಾನ್ಯವಾಗಿ ಉಪಯೋಗಿಸುವಂಥ ಪದವನ್ನು ಬಳಸಿರಿ. ಮರಣದ ಚಿಂತನೆಯು ತುಂಬಾ ಕಠಿಣವಾದದ್ದು ಎಂಬ ಕಾರಣದಿಂದ ಪದವನ್ನು ಬಳಸದೇ ಇರಬೇಡಿರಿ.

ಅನುವಾದದ ಪದಗಳು